ಹುಣಸೂರು ‘ಕೈ’ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಬೆಂಬಲಿಗರ ವಿರುದ್ದ ಹಲ್ಲೆ ಆರೋಪ: ಪ್ರಕರಣ ದಾಖಲು….

ಹುಣಸೂರು,ನ,19,2019(www.justkannada.in):  ಹುಣಸೂರು ಕ್ಷೇತ್ರ ಉಪಚುನಾವಣೆ ಸಮೀಪಿಸುತ್ತಿರುವ ಸಮಯದಲ್ಲೇ ಕಾಂಗ್ರೆಸ್ ಅಭ್ಯರ್ಥಿ ಹೆಚ್.ಪಿ ಮಂಜುನಾಥ್ ಬೆಂಬಲಿಗರ ವಿರುದ್ದ ಹಲ್ಲೆ ಆರೋಪ ಕೇಳಿ ಬಂದಿದೆ.

ಮಾಜಿ‌ ಶಾಸಕ ಹೆಚ್.ಪಿ.ಮಂಜುನಾಥ್ ಮತ್ತು ಬೆಂಬಲಿಗರು ಮತಯಾಚನೆ ವೇಳೆ ಗೂಂಡಾ ವರ್ತನೆ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಹುಣಸೂರು ತಾಲ್ಲೂಕು ಬಿಳಿಗೆರೆ ಗ್ರಾಮದಲ್ಲಿ ಮತಯಾಚನೆ ವೇಳೆ,  ಕೆಲಸ ಮಾಡದೇ ಓಟು ಕೇಳುತ್ತಿದ್ದೀರಾ ಎಂದು ಕೇಳಿದ ಗ್ರಾಮದ ಕುರುಬ ಸಮುದಾಯದ ಇಬ್ಬರ ಮೇಲೆ  ಹೆಚ್.ಪಿ ಮಂಜುನಾಥ್ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಹೆಚ್.ಪಿ.ಮಂಜುನಾಥ್ ಬೆಂಬಲಿಗ ಜೆಡ್.ಪಿ.ಮಂಜುನಾಥ್ ರಿಂದ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ.

ಈ ಸಂಬಂಧ  ಹುಣಸೂರು ಗ್ರಾಮಾಂತರ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಪಚುನಾವಣೆ ಸಮೀಪದಲ್ಲಿರುವಾಗಲೇ ಹೆಚ್.ಪಿ ಮಂಜುನಾಥ್ ಕುರುಬ‌ ಸಮಾಜದ ಮತದಾರರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

Key words: hunsur-congress candidate-hp  Manjuranath -supporters – assault- accused