ಟೆನ್ನಿಸ್: ಟಾಪ್ 5 ಸ್ಥಾನ ಅಲಂಕರಿಸಿದ ಬಿಯಾಂಕಾ ಆಯಂಡ್ರಿಸ್ಕಾ

Promotion

ನ್ಯೂಯಾರ್ಕ್‌, 10, 2019 (www.justkannada.in): ಯುಎಸ್‌ ಓಪನ್‌ ಗ್ರ್ಯಾನ್‌ಸ್ಲಾಮ್‌ ಗೆದ್ದ ಕೆನಡಿಯನ್‌ ಆಟಗಾರ್ತಿ ಬಿಯಾಂಕಾ ಆಯಂಡ್ರಿಸ್ಕಾ ಈಗ ಮೊದಲ ಸಲ ಟಾಪ್‌-5 ಸ್ಥಾನ  ಅಲಂಕರಿಸಿದ್ದಾರೆ.

ಒಂದು ವರ್ಷದ ಹಿಂದೆ ವಿಶ್ವ ರ್‍ಯಾಂಕಿಂಗ್‌ನಲ್ಲಿ 200ನೇ ಸ್ಥಾನಲ್ಲಿದ್ದ ಬಿಯಾಂಕಾ ಆಯಂಡ್ರಿಸ್ಕಾ ಟಾಪ್ 5ಗೆ ಬಂದಿದ್ದಾರೆ.

ಫೈನಲ್‌ನಲ್ಲಿ ಸೆರೆನಾ ವಿಲಿಯಮ್ಸ್‌ ಅವರನ್ನು ಮಣಿಸಿ ಮೊದಲ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿಯನ್ನೆತ್ತಿದ ಬಿಯಾಂಕಾ ಈಗ 10 ಸ್ಥಾನ ನೆಗೆದು 5ಕ್ಕೆ ಬಂದಿದ್ದಾರೆ.