ಶಿಕ್ಷಕರ  ವರ್ಗಾವಣೆ ವಿಚಾರ: ಅಧಿಕಾರಿಗಳ ವಿರುದ್ಧ ಸಭಾಪತಿ ಬಸವರಾಜ ಹೊರಟ್ಟಿ ವಾಗ್ದಾಳಿ.

ಬೆಂಗಳೂರು,ಸೆಪ್ಟಂಬರ್,29,2021(www.justkannada.in):  ದರಿದ್ರ ಅಧಿಕಾರಿಗಳಿಂದ ಶಿಕ್ಷಕರ ವರ್ಗಾವಣೆ ಮುಂದಕ್ಕೆ ಹೋಗುತ್ತಿದೆ. ಶಿಕ್ಷಣ ಇಲಾಖೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲ ಎಂದು ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಣ ಸಚಿವರಿಗೆ ಅಧಿಕಾರಿಗಳು ಸರಿಯಾಗಿ ಮಾಹಿತಿ ನೀಡುತ್ತಿಲ್ಲ.  ಸುಗ್ರಿವಾಜ್ಞೆ ಮೂಲಕ ವರ್ಗಾವಣೆ ಆಗಬೇಕಿತ್ತು. ಆದ್ರೆ ಧರಿದ್ರ ಅಧಿಕಾರಿಗಳಿಂದ ಅದು ಆಗಿಲ್ಲ. ಬೇಕಂತಲೆ 3 ತಿಂಗಳ ಕಾಲ ಪ್ರಕ್ರಿಯೆ ಮುಂದೂಡಿದರು ಎಂದು ಕಿಡಿಕಾರಿದರು.SSLC examination -should not be- cancel-Basavaraja horatti

ಅಕ್ಟೋಬರ್ 4 ರಂದು ಹಿಯರಿಂಗ್ ಇದೆ. ರಾಜ್ಯದಲ್ಲಿ ಕಡ್ಡಾಯ ವರ್ಗಾವಣೆ ಕಾನೂನು ಇಲ್ಲ. ವರ್ಗಾವಣೆ ವಿಚಾರದಲ್ಲಿ ಸರ್ಕಾರದ ಪಾತ್ರ ಇಲ್ಲ. ಎಲ್ಲದಕ್ಕೂ ಅಧಿಕಾರಿಗಳೇ ಕಾರಣ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹರಿಹಾಯ್ದರು.

Key words: Teacher –Transfer- Issues-Basavaraja horatti-against -officer