ಟಿ20 ವಿಶ್ವಕಪ್ ಭಾರತದಿಂದ ಯುಎಇಗೆ ಸ್ಥಳಾಂತರ

Promotion

ಬೆಂಗಳೂರು, ಜೂನ್ 26, 2021 (www.justkannada.in)ಭಾರತದಲ್ಲಿ ನಡೆಯಬೇಕಿದ್ದ ಟಿ20 ವಿಶ್ವಕಪ್ ಯುನೈಟೆಟ್ ಅರಬ್ ಎಮಿರೇಟ್ಸ್ ಗೆ ಸ್ಥಳಾಂತರವಾಗಿದೆ.

ಟಿ20 ವಿಶ್ವಕಪ್ ಕೂಟವು ಅಕ್ಟೋಬರ್ 17ರಂದು ಆರಂಭವಾಗಲಿದ್ದು, ನವೆಂಬರ್ 14ರಂದು ಫೈನಲ್ ಪಂದ್ಯ ನಡೆಯಲಿದೆ.

ಭಾರತದಲ್ಲಿ ಕೋವಿಡ್ 19 ಸೋಂಕಿನ ಸಂಕಟ ಇನ್ನೂ ಕಡಿಮೆಯಾಗದ ಕಾರಣ ಬಿಸಿಸಿಐ ದೇಶದ ಹೊರಗಡೆ ಕೂಟವನ್ನು ನಡೆಸಲು ತೀರ್ಮಾನಿಸಿದೆ.

ಐಪಿಎಲ್ ಕೂಡ ಯುಎಇ ನಲ್ಲಿ ನಡೆಯಲಿದೆ. ಸಪ್ಟೆಂಬರ್ 19ರಿಂದ ಅಕ್ಟೋಬರ್ 15ರವರೆಗೆ ಐಪಿಎಲ್ ನಡೆಯಲಿದೆ.  ಪಂದ್ಯಾವಳಿ ಎಲ್ಲಿ ನಡೆದರೂ ಕೂಟದ ಆಯೋಜಕರೂ ಬಿಸಿಸಿಐ ಆಗಿರಲಿದೆ.