ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ರಷ್ಟು ಮೀಸಲಾತಿ ಎತ್ತಿ ಹಿಡಿದ ಸುಪ್ರೀಂಕೋರ್ಟ್.

Promotion

ನವದೆಹಲಿ,ನವೆಂಬರ್.7,2022(www.justkannada.in): ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ. 10 ರಷ್ಟು ಮೀಸಲಾತಿ ವಿಚಾರ ನೀಡುವ ಕುರಿತು ಸುಪ್ರೀಂ ಕೋರ್ಟ್ ಮಹತ್ವದ  ತೀರ್ಪು ನೀಡಿದ್ದು, ಐವರು ನ್ಯಾಯಮೂರ್ತಿಗಳ ಪೈಕಿ  ಮೂವರು ನ್ಯಾಯಮೂರ್ತಿಗಳು ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದ್ದಾರೆ.

ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ದಿನೇಶ್ ಮಹೇಶ್ವರಿ , ನ್ಯಾ ತ್ರಿವೇದಿ,  ನ್ಯಾ ಪಾರ್ದಿವಾಲ ಅವರು EWS ಪರ  ತೀರ್ಪು ನೀಡಿದ್ದಾರೆ.  ಆರ್ಥಿಕ ಮೀಸಲಾತಿ ಸಂವಿಧಾನ ಉಲ್ಲಂಘನೆ ಅಲ್ಲ. EWS  ಕೋಟಾದಿಂದ  ಸಂವಿಧಾನದ ಆಶಯ ಉಲ್ಲಂಘನೆಯಾಗಲ್ಲ. EWS ತಾರತಮ್ಯದಿಂದ ಕೂಡಿಲ್ಲ. ಎಸ್ ಸಿ  ಮತ್ತು ಎಸ್ ಟಿ, ಹಿಂದುಳಿದವರಿಗೆ ಮೀಸಲಾತಿ ಇದೆ. ಆರ್ಥಿಕವಾಗಿ ಹಿಂದುಳಿದವರಿಗೂ ಮೀಸಲಾತಿ  ಅವಶ್ಯಕ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಕೇಂದ್ರ ಸರ್ಕಾರ ಶಿಕ್ಷಣ ಉದ್ಯೋಗಕ್ಕೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10 ಮೀಸಲಾತಿ ನೀಡಿದ್ದು ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಾಗಿತ್ತು.  ಈ ಸಂಬಂಧ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಸರ್ಕಾರದ ತೀರ್ಮಾನವನ್ನು ಎತ್ತಿ ಹಿಡಿದಿದೆ.

Key words:  Supreme Court –upheld-10% reservation – economically- backward

ENGLISH SUMMARY…

SC upholds judgement on Union Govt.s 10% reservation for economically backward candidates
New Delhi, November 7, 2022 (www.justkannada.in): The Hon’ble Supreme Court bench comprising five judges, in its judgement on 10% reservation for the economically backward classes has upheld the government’s decision.
Justice Dinesh Maheshwari, Justice Trivedi and Justice Pardiwala have given judgement supporting the EWS. “Providing reservation for the economically backward classes is not violation of constitution. The purpose of the constitution is not violated by the EWS quota. EWS is not biased. There is reservation for SC and STs. Likewise reservation is also required for the economically backward classes, they observed.
The Government of India has provided 10% reservation in education and jobs for the economically backward classes. An appeal was made in the apex court against this. The Hon’ble SC heard the case and upheld the Union Govt.s decision.
Keywords: Reservation/ Supreme Court/ Economically backward/ uphold