ಮರದ ಬಳಿ ನಿಂತಾಗ ವಿದ್ಯುತ್ ಶಾಕ್: ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಸಾವು.

ಮೈಸೂರು ,ನವೆಂಬರ್,7,2022(www.justkannada.in):  ಮನೆ ಮುಂದಿನ ಮರಕ್ಕೆ ವಿದ್ಯುತ್ ತಂತಿ ತಗುಲಿದ ಪರಿಣಾಮ, ಮರದ ಸನಿಹದಲ್ಲಿದ್ದ ವಿದ್ಯಾರ್ಥಿಗೆ  ವಿದ್ಯುತ್ ಶಾಕ್ ಹೊಡೆದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ಕೆ ಆರ್ ನಗರ ತಾಲ್ಲೂಕಿನ ಮಳಲಿ ಗ್ರಾಮದಲ್ಲಿ ನಡೆದಿದೆ.

ಮಳಲಿ ಗ್ರಾಮದ ಕಾಡೇಗೌಡರ ಮಗ ಮನೋಜ್ (16) ಮೃತಪಟ್ಟ ವಿದ್ಯಾರ್ಥಿ.  ಹತ್ತನೇ ತರಗತಿ ಓದುತ್ತಿದ್ದ ಮನೋಜ್‌ ದಾರುಣ ಸಾವನ್ನಪ್ಪಿದ್ದಾನೆ.  ಮುಂಜಾನೆ ಎದ್ದು ಮನೆ ಮುಂದೆ ಇರುವ ನುಗ್ಗೆ ಮರದ ಬಳಿ ನಿಂತಾಗ ವಿದ್ಯುತ್ ಶಾಕ್ ಹೊಡೆದಿದೆ.

ಮರಕ್ಕೆ 11 ಕೆ‌ ವಿ  ವಿದ್ಯುತ್ ತಂತಿ ಸ್ಪರ್ಶಗೊಂಡಿದ್ದನ್ನು ತಿಳಿಯದೆ ಮನೋಜ್ ಮರದ ಬಳಿ ಹೋಗಿದ್ದು ಈ ವೇಳೆ ವಿದ್ಯುತ್ ಶಾಕ್ ಗೆ ಒಳಗಾಗಿ ಮನೋಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.  ಟಿ ನರಸೀಪುರದ  ನಿಲುಸೋಗೆ ಗ್ರಾಮದಲ್ಲಿ ಮೂವರು ರೈತರ ಸಾವಿನ ಘಟನೆ ಮಾಸುವ ಮುನ್ನವೇ, ಚೆಸ್ಕಾಂ ಅಧಿಕಾರಿಗಳ ನಿರ್ಲಕ್ಷಕ್ಕೆ ಕೆ ಆರ್ ನಗರದಲ್ಲಿ ಮತ್ತೊಂದು ಬಲಿಯಾಗಿದೆ. ಈ ಸಂಬಂಧ ಸೂಕ್ತ ಪರಿಹಾರ ನೀಡುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.

Key words: Electric -shock –  SSLC -student –dies-KR Nagar