ಆಪ್ತ ಕೆ.ಸಿ ಬಲರಾಮು ನಿಧನ ಹಿನ್ನೆಲೆ: ಇಂದು ಮೈಸೂರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ….

Promotion

ಮೈಸೂರು,ಮಾರ್ಚ್,20,2021(www.justkannada.in): ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಸಿ ಬಲರಾಮು ಅವರು ಆತ್ಮಹತ್ಯೆಗೆ ಶರಣಾದ ಹಿನ್ನೆಲೆ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆಯಲು  ಮಾಜಿ ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿಗೆ ಆಗಮಿಸುತ್ತಿದ್ದಾರೆ.jk

ಕೆ.ಸಿ.ಬಲರಾಮು ಸಿದ್ದರಾಮಯ್ಯ ಅವರ ಆಪ್ತರಾಗಿದ್ದು ಇತ್ತೀಚೆಗೆ ನಡೆದ ಮೈಮುಲ್ ಎಲೆಕ್ಷನ್ ನಲ್ಲಿ ಸ್ಪರ್ಧಿಸಿ ಸೋಲು ಕಂಡಿದ್ದರು. ಇದರಿಂದ ಮನನೊಂದು ಕೆ.ಸಿ ಬಲರಾಮು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದರು.  ಆದರೆ ಚಿಕಿತ್ಸೆ ಫಲಿಸದೆ ಕೆಸಿ ಬಲರಾಮು ಮೃತಪಟ್ಟಿದ್ದಾರೆ.

supporter- KC Balaramu- death-former cm- siddaramaiah-mysore
ಕೃಪೆ-internet

ಈ ನಡುವೆ ತಮ್ಮ ಆಪ್ತನ ಅಂತಿಮ ದರ್ಶನ ಪಡೆಯಲು  ಮಾಜಿ ಸಿಎಂ  ಸಿದ್ದರಾಮಯ್ಯ ಮಧ್ಯಾಹ್ನ 3.45 ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ಮೈಸೂರು ತಾಲೂಕಿನ ಕುಪ್ಯ ಗ್ರಾಮದಲ್ಲಿ ಅಂತಿಮ ಸಂಸ್ಕಾರದಲ್ಲಿ ಸಿದ್ದರಾಮಯ್ಯ ಭಾಗಿಯಾಗಲಿದ್ದಾರೆ.

Key words: supporter- KC Balaramu- death-former cm- siddaramaiah-mysore