ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ಧಾಳಿ ; ಮೂವರು ಮಹಿಳೆಯರ ರಕ್ಷಣೆ 

ಮೈಸೂರು,ಮಾರ್ಚ್,20,2021(www.justkannada.in) : ಕಾಮನಕೇರಿ ಹುಂಡಿ ಗ್ರಾಮದ ಮನೆಯೊಂದರ ವೇಶ್ಯಾವಾಟಿಕೆ ದಂಧೆ ಮೇಲೆ ಪೊಲೀಸ್ ಧಾಳಿ ಉತ್ತರ ಭಾರತದ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು ಮೂರು ಜನ ಮಹಿಳೆಯರ ರಕ್ಷಣೆ ಮಾಡಲಾಗಿದೆ.

jkಮೈಸೂರು ದಕ್ಷಿಣ ಪೊಲೀಸ್ ಠಾಣೆ ವ್ಯಾಪ್ತಿಯ ಕಾಮನಕೇರಿ ಹುಂಡಿ ಗ್ರಾಮದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆರ್.ಶಿವಕುಮಾರ್ ಅವರು ಮಾನವ ಕಳ್ಳಸಾಗಣೆ ನಿಷೇಧ ಘಟಕದ ಸಿಬ್ಬಂದಿಯೊಟ್ಟಿಗೆ ದಾಳಿ ಮಾಡಿ ಮಹಿಳೆ ರಕ್ಷಿಸಿದ್ದಾರೆ.ಸಿ.ಪಿ.ಐ ಮಹೇಶ್, ವರುಣ ಠಾಣೆ ಪಿ.ಎಸ್.ಐ ಲಕ್ಷ್ಮಿ, ಮಹಿಳಾ ಠಾಣೆ ಪಿ.ಎಸ್.ಐ  ಎಲ್.ಸುಷ್ಮಾ, ಎ.ಹೆಚ್.ಟಿ.ಯು ಸಿಬ್ಬಂದಿ ಸುನಿಲ್, ರಾಮ್ ಪ್ರಸಾದ್, ಕುಮುದಾ, ಶ್ರೀನಿವಾಸ್ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

key words : police-raid-brothel-Protection-three-women