ಐಪಿಎಲ್: ಚೆನ್ನೈನಲ್ಲಿಂದು ಸನ್ ರೈಸರ್ಸ್ ಹೈದರಾಬಾದ್- ಮುಂಬೈ ಇಂಡಿಯನ್ಸ್ ಫೈಟ್

ಬೆಂಗಳೂರು, ಏಪ್ರಿಲ್ 17, 2021 (www.justkannada.in): ಇಂದು ಮುಂಬೈ ಇಂಡಿಯನ್ಸ್ ತಂಡ  ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಸೆಣಸಾಡಲಿದೆ. ಅಂದಹಾಗೆ ಈ ಪಂದ್ಯಕ್ಕೆ ಮಳೆಯ ಅಡ್ಡಿ ಇರುವುದಿಲ್ಲ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿರುವ ಸನ್ ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದು ಜಯದ ಖಾತೆ ತೆರೆಯಲಿದೆಯೇ ಕಾದು ನೋಡಬೇಕಿದೆ.

ಪಂದ್ಯ ಸಂಜೆ 7.30ಕ್ಕೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ. ಸ್ಟಾರ್ ಸ್ಪೋರ್ಟ್ಸ್ ನೆಟ್ ವರ್ಕ್ ನಲ್ಲಿ ಪಂದ್ಯದ ನೇರಪ್ರಸಾರ ಲಭ್ಯವಿರಲಿದ್ದು ಡಿಸ್ನಿ + ಹಾಟ್‌ಸ್ಟಾರ್ VIP ಚಂದಾದಾರರು ಸಹ ಪಂದ್ಯವನ್ನು ವೀಕ್ಷಿಸಬಹುದು.