ಡಿ.6ರಂದು ರಾಜ್ಯಾದ್ಯಂತ ‘ಬಬ್ರೂ’ ತೆರೆಗೆ…

Promotion

ಮೈಸೂರು:12 ನವೆಂಬರ್ 2019 : ಅಮೆರಿಕಾದಲ್ಲೇ ನೆಲೆಸಿರುವ ಕನ್ನಡಿಗರಿಂದ ತಯಾರಾದ ‘ಬಬ್ರೂ’ಚಿತ್ರ ಡಿ.6ರಂದು ರಾಜ್ಯಾದ್ಯಂತ ತೆರೆ ಕಾಣಲಿದೆ.

ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ವ್ಯವಸ್ಥಾಪಕ ನಿರ್ಮಾಪಕ ಗುರುದೇವ್ ನಾಗರಾಜ್ ಹೇಳಿದಿಷ್ಟು….
ಬೆಳದಿಂಗಳ ಬಾಲೆ,ನಿಷ್ಕರ್ಷ ,ನಮ್ಮೂರ ಮಂದಾರ ಹೂವೇ,ಹೂ ಮಳೆ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದೀದ್ದಾ ಬೆಳದಿಂಗಳ ಬಾಲೆ ಖ್ಯಾತಿಯ ಸುಮನ್ ನಗರ್ಕರ್ ಇದೀಗ 15 ವರ್ಷದ ನಂತರ ಮತ್ತೆ ಬಬ್ರೂ ಚಿತ್ರದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೂ ಯುಗ ಕ್ರಿಯೇಷನ್ ವತಿಯಿಂದ ನಿರ್ಮಿಸಿರುವ ಸಸ್ಪೆನ್ಸ್ ಕಂ ಥ್ರಿಲರ್‌ ಮೂವಿಯಲ್ಲಿ ಮಾಹಿ ಹಿರೇಮಠ ಪ್ರಮುಖ ಪಾತ್ರದಲ್ಲಿ, ಗಾನಭಟ್, ಜೈ ಜಗದೀಶ್, ಪ್ರಕೃತಿ ಕಶ್ಯಪ್ ಮೊದಲಾದವರು ಮುಖ್ಯ ಭೂಮಿಕೆಯಲ್ಲಿದ್ದು, ಕನ್ನಡ ಸಿನಿಮಾದಲ್ಲಿ ತೋರಿಸಲಾಗದ ಅಮೇರಿಕಾವನ್ನು ಈ  ಚಿತ್ರದಲ್ಲಿ ತೋರಿಸಲಾಗಿದೆ.

ಮೆಕ್ಸಿಕೊದಿಂದ ಕೆನಡಾವರೆಗೂ ನಡೆಯುವ ಜರ್ನಿ, ಈ ಜರ್ನಿಯಲ್ಲಿ ನಡೆಯುವ ಘಟನೆಗಳೇ ಕಥಾ ವಸ್ತುವಾಗಿವೆ ಎಂದು ಕಥೆ ಹುಟ್ಟಿನ ಗುರು ಆವರು ಮೆಲುಕು ಹಾಕಿ. ಹಾಲಿವುಡ್ ಶೈಲಿಯಲ್ಲಿ ನಿರ್ಮಾಣವಾಗಿರುವ ಕನ್ನಡ ಚಿತ್ರ ಇದಾಗಿದ್ದು, ಮೈಸೂರಿನವರಾದ ಪೂರ್ಣಚಂದ್ರ ತೇಜಸ್ವಿಯವರ ಸಂಗೀತ ನಿರ್ದೇಶನ ಹಾಗೂ ಸುಜಯ್ ರಾಮಯ್ಯನವರ ಛಾಯಾಗ್ರಹಣ ಇದೆ ಎಂದರು.
ವಿಜಯಪ್ರಕಾಶ್, ಚಂದನ್ ಶೆಟ್ಟಿ. ಸಂದೀಪ್ ಹೆಗಡೆಯವರ ಹಿನ್ನಲೆ ಗಾಯನವಿದ್ದು, ಸ್ಪಾನಿಷ್ ಮಿಶ್ರಿತ ಕನ್ನಡವನ್ನು ಬಳಸಲಾಗಿದೆ ಎಂದರು.
ಹದಿನೈದು ವರ್ಷಗಳ ನಂತರ ಮತ್ತೆ ತೆರೆ ಮೇಲೆ ಕಾಣಿಸಿರುವ ಸುಮನ್ ನಗರ್ಕರ್ ಲವಲವಿಕೆಯಿಂದಲೇ ತಮ್ಮ ಪಾತ್ರದ ಬಗ್ಗೆ ಅನಿಸಿಕೆ ಹಂಚಿಕೊಂಡರು, ಚಿತ್ರದ ನಾಯಕ ಮಾಹಿ ಹಿರೇಮಠ್, ಗಾನಭಟ್, ಸುಮುಖ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಹಾಗೂ ಇತರರು ಗೋಷ್ಠಿಯಲ್ಲಿ ಹಾಜರಿದ್ದರು.

key words : suman.nagarkar-babru-kannada-new-film

ENGLISH SUMMARY:

Suman Nagarkar is a well known name in the Kannada Film Industry. Popularly known as Beladingala Baale she gained popularity with her performances in Nishkarsha; Kalyana Mantapa; Nammura Mandaara Hoove; BeladingaLa Baale; HooMaLe and others.

Suman moved to America and took a long career break. She came back to acting a few years ago with guest roles in Ishtakamya, Summer Holidays and the award winning film Jeerjimbe.
Suman is now playing a lead role in a film called BABRU which is the first Hollywood Kannada Film completely filmed in the USA by NRI Kannadigas.