ನಾನು ಯಾರ ಸಿಎಂ ಪಟ್ಟವನ್ನ ತಪ್ಪಿಸಿಲ್ಲ-  ಜೆಡಿಎಸ್ ಗೆ ಪರೋಕ್ಷ ಟಾಂಗ್ ಕೊಟ್ಟ ಸಿದ್ದರಾಮಯ್ಯ…

ಬೆಂಗಳೂರು,ನ,12,2019(www.justkannada.in): ಮಲ್ಲಿಕಾರ್ಜುನ ಖರ್ಗೆಯನ್ನ ಸಿಎಂ ಮಾಡಲು ಕಾಂಗ್ರೆಸ್ ಹೈಕಮಾಂಡ್ ಒಪ್ಪಲಿಲ್ಲ ಎಂದು ಹೇಳಿಕೆ ನೀಡಿದ್ದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರಿಗೆ ಮಾಜಿ ಸಿಎಂ ಸಿದ್ಧರಾಮಯ್ಯ ಪರೋಕ್ಷ ಟಾಂಗ್ ಕೊಟ್ಟಿದ್ದಾರೆ.  ನಾನು ಯಾರ ಸಿಎಂ ಪಟ್ಟವನ್ನೂ ತಪ್ಪಿಸಿಲ್ಲ ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವಿಟ್ಟರ್ ನಲ್ಲಿ ಟ್ವಿಟ್ ಮಾಡಿರುವ ಮಾಜಿ ಸಿಎಂ ಸಿದ್ಧರಾಮಯ್ಯ, ಕೋಮುವಾದಿ ಬಿಜೆಪಿಯನ್ನ ದೂರವಿಡಲು ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದವು. ಹೀಗಾಗಿ ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡಿತ್ತು. ಹೈಕಮಾಂಡ್ ತೀರ್ಮಾನದಂತೆ ಆದೇಶ ಪಾಲಿಸಿದ್ದೆ ಎಂದು ತಿಳಿಸಿದ್ದಾರೆ.

ಹಾಗೆಯೇ ಪಕ್ಷದ ಹೈಕಮಾಂಡ್ ಜತೆ ಹೆಚ್.ಡಿ ದೇವೇಗೌಡರು ಚರ್ಚಿಸಿದ್ದರು. ಮೈತ್ರಿ ಸರ್ಕಾರ ರಚಿಸಿದ್ದೇ ದೇವೇಗೌಡರು. ದೇವೇಗೌಡರು ಹೈಕಮಾಂಡ್ ಜತೆ ಚರ್ಚಿಸುವಾಗ ನಾನು ಇರಲಿಲ್ಲ. ಆಮೇಲೆ ನನ್ನ ಕೇಳಿದರು. ಹೀಗಿರುವಾಗ ನಾನು ಸಿಎಂ ಪಟ್ಟ ತಪ್ಪಿಸಿದ್ದೆ ಎಂದು ಹೇಳಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Key words:  missed – CM –post-former CM- Siddaramaiah- indirect -tong -JDS