ಸಂಸದೆ ಸುಮಲತಾ ಅಂಬರೀಶ್’ಗೆ ಅನಾರೋಗ್ಯ: ಮಂಡ್ಯದಲ್ಲಿ ನಡೆಯಬೇಕಿದ್ದ ಅಹವಾಲು ಸ್ವೀಕಾರ ಕಾರ್ಯಕ್ರಮ ರದ್ದು

Promotion

ಮಂಡ್ಯ, ಜೂನ್ 23,2019 (www.justkannada.in): ಅನಾರೋಗ್ಯದ ಹಿನ್ನೆಲೆಯಲ್ಲಿ ಸಂಸದೆ ಮಂಡ್ಯದಲ್ಲಿ ಕ್ಷೇತ್ರದ ಜನರಿಂದ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ರದ್ದು ಪಡಿಸಿದ್ದಾರೆ.

ಮಂಡ್ಯದಲ್ಲಿ ಇಂದು ಸುಮಲತಾ ಅವರು ಸಾರ್ವಜನಿಕರ ಅಹವಾಲು ಸ್ವೀಕಾರ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಇಂದು ಕ್ಷೇತ್ರಕ್ಕೆ ತೆರಳಿ ಜನರ ಸಮಸ್ಯೆಗಳನ್ನು, ಮನವಿಗಳ ಮೂಲಕ, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರವನ್ನು ರೂಪಿಸಿದ್ದರು.

ಆದರೆ ಅನಾರೋಗ್ಯ ಕಾಣಿಸಿಕೊಂಡ ಹಿನ್ನಲೆಯಲ್ಲಿ, ಇಂದಿನ ಅವರ ಕಾರ್ಯಕ್ರಮ ರದ್ದಾಗಿದೆ. ಈ ಮೂಲಕ ಇಂದು ನಿಗಧಿಯಾಗಿದ್ದ ಕಾರ್ಯಕ್ರಮ ರದ್ದುಗೊಂಡು, ಮುಂದೂಡಲಾಗಿದೆ. ಮತ್ತೆ ಅಹವಾಲು ಸ್ವೀಕರಿಸುವ ಕಾರ್ಯಕ್ರಮವನ್ನು ಎಂದು ನಡೆಸಲಿದ್ದಾರೆ.