‘ಕೃಷ್ಣ ಟಾಕೀಸ್‌’ನಲ್ಲಿ ಕಿಚ್ಚನ ಗಾನ ಬಜಾನಾ !

Promotion

ಬೆಂಗಳೂರು, ನವೆಂಬರ್ 12, 2019 (www.justkannada.in): ಅಜೇಯ್‌ರಾವ್‌ ಅಭಿನಯದ ‘ಕೃಷ್ಣ ಟಾಕೀಸ್‌’ ಚಿತ್ರಕ್ಕೆ ಹಾಡೊಂದನ್ನು ಹಾಡಲು ನಟ ಕಿಚ್ಚ ಸುದೀಪ್ ಗ್ರೀನ್‌ ಸಿಗ್ನಲ್‌ ಕೊಟ್ಟಿದ್ದಾರೆ.

ಇತ್ತೀಚೆಗೆ ಶ್ರೀಧರ್‌ ವಿ. ಸಂಭ್ರಮ್‌ ಅವರು ಭೇಟಿಯಾಗಿ ಹಾಡುವಂತೆ ಮನವಿ ಮಾಡಿದ್ದಾರೆ. ಅಷ್ಟೇ ಅಲ್ಲ, ಸುದೀಪ್‌ ಹಾಡುವ ಟ್ರಾಕ್‌ ಸಾಂಗ್‌ ಅನ್ನು ಸಹ ಸುದೀಪ್‌ ಅವರಿಗೆ ಕೇಳಿಸಿದ್ದಾರೆ. ಹಾಡು ಕೇಳಿದ ಸುದೀಪ್‌, ಇಷ್ಟಪಟ್ಟು, ಹಾಡುವುದಾಗಿ ಹೇಳಿದ್ದಾರೆ.

ಅಂದಹಾಗೆ ಕಿಚ್ಚ ಸುಮ್ಮನೆ ಹಾಡಲು ಒಪ್ಪುವುದಿಲ್ಲ. ಸಾಹಿತ್ಯ ಇಷ್ಟವಾಗಬೇಕು, ಟ್ಯೂನ್‌ ಚೆನ್ನಾಗಿದೆ ಎನಿಸಬೇಕು. ಎಲ್ಲದ್ದಕ್ಕೂ ಹೆಚ್ಚಾಗಿ, ಟ್ರೆಂಡಿ ಸಾಂಗ್‌ ಅಂದರೆ ಅವರು ಹಾಡಲು ಮುಂದಾಗುತ್ತಾರೆ. ಇದೀಗ ಆ ಸಾಂಗ್ ಹೇಗಿರಬೇಕು ಎಂಬುದೇ ಅಭಿಮಾನಿಯಗಳ ಕೌತುಕ.