Thursday, August 6, 2026

BDA Apartments

Home Crime ದೆವ್ವದ ವೇಷದಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದವರು ಲಾಕಪ್’ನಲ್ಲಿ ಕಂಬಿ ಎಣಿಸುತ್ತಿದ್ದಾರೆ !

ದೆವ್ವದ ವೇಷದಲ್ಲಿ ದರೋಡೆಗೆ ಸಂಚು ಹಾಕುತ್ತಿದ್ದವರು ಲಾಕಪ್’ನಲ್ಲಿ ಕಂಬಿ ಎಣಿಸುತ್ತಿದ್ದಾರೆ !

ಬೆಂಗಳೂರು, ನವೆಂಬರ್ 12, 2019 (www.justkannada.in): ದೆವ್ವದ ವೇಷ ಹಾಕಿಕೊಂಡು ಸಾರ್ವಜನಿಕರನ್ನು ಬೆದರಿಸಿ ದರೋಡೆಗೆ ಹೊಂಚು ಹಾಕುತ್ತಿದ್ದ ಏಳು ಮಂದಿಯನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಆರ್‍ಟಿ ನಗರದ ಶಾನ್ ಮಲ್ಲಿಕ್ (20), ನವೀದ್ (20), ಸಜಿಲ್ ಮಹಮ್ಮದ್ (21), ಸಾಕಿಬ್ (20), ಸಯ್ಯದ್ ನಬೀಲ್ (20) ಮತ್ತು ಯೂಸುಫ್ ಅಹಮ್ಮದ್ (20), ನಾಗವಾರದ ಮಹಮ್ಮದ್ ಅಕ್ಯೂಬ್ (20) ಬಂಧಿತರು.

ಇವರೆಲ್ಲರೂ ಗುಂಪು ಕಟ್ಟಿಕೊಂಡು ಬೆಳಗಿನ ಜಾವ 2.30ರ ಸುಮಾರಿನಲ್ಲಿ ಶರೀಫ್ ನಗರದ ಬಳಿ ದೆವ್ವದ ವೇಷ ಹಾಕಿಕೊಂಡು ರಸ್ತೆಯಲ್ಲಿ ಹೋಗುವ ವಾಹನ ಅಡ್ಡಗಟ್ಟಿ ಸವಾರರಿಗೆ ಭಯಾನಕ ರೀತಿಯಲ್ಲಿ ಬೆದರಿಸಿ ಹಣ ಸುಲಿಗೆಗೆ ಹೊಂಚು ಹಾಕುತ್ತಿದ್ದರು.

ಈ ಮಾರ್ಗದಲ್ಲಿ ಬೆಳಗಿನ ಜಾವ ಪೊಲೀಸರು ಗಸ್ತಿನಲ್ಲಿದ್ದಾಗ ಪರಾರಿಯಾಗಲು ಯತ್ನಿಸಿದ ಏಳು ಮಂದಿಯನ್ನು ಬಂಧಿಸಿ ಠಾಣೆಗೆ ಕರೆತಂದು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.