2500 ಸ್ಕ್ರೀನ್’ಗಳಲ್ಲಿ ‘ಪೈಲ್ವಾನ್’ ಮಿಂಚು !

Promotion

ಬೆಂಗಳೂರು, ಜುಲೈ 02, 2019 (www.justkannada.in): ಕಿಚ್ಚ ಸುದೀಪ್ ನಟನೆಯ ಪೈಲ್ವಾನ್ ಆಗಸ್ಟ್ ತಿಂಗಳಲ್ಲಿ ತೆರೆ ಮೇಲೆ ಬರಲಿದೆ. ಕನ್ನಡ, ತೆಲುಗು, ತಮಿಳು ಸೇರಿದಂತೆ ಈ ಚಿತ್ರ ಒಟ್ಟು ಐದು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಪೈಲ್ವಾನ್ ಚಿತ್ರ ವಿಶ್ವದಾದ್ಯಂತ 2500 ಸ್ಕ್ರೀನ್‌ಗಳಲ್ಲಿ ಬಿಡುಗಡೆಯಾಗಿದೆ. ಆಗಸ್ಟ್ 8, 2019ರಂದು ಥೀಯಟರ್‌ನಲ್ಲಿ ಬಿಡುಗಡೆ ಕಾಣಲಿರುವ ಪೈಲ್ವಾನ್, ಭಾರೀ ನಿರೀಕ್ಷೆ ಮೂಡಿಸಿದೆ.

ಬಿಗ್ ಬಜೆಟ್ ಹಾಗೂ ರಿಚ್ ಮೇಕಿಂಗ್ ಮೂಲಕ ಈಗಾಗಲೇ ಸಾಕಷ್ಟು ಗಮನಸೆಳೆದಿರುವ ಪೈಲ್ವಾನ್ ಚಿತ್ರವು ಇದೀಗ 2500 ತೆರೆಗಳಲ್ಲಿ ಮಿಂಚಲು ಸಜ್ಜಾಗಿದೆ.