ಈ ಬಾರಿಯ ದೆಹಲಿ ಭೇಟಿ ವೇಳೆ ಸಂಪುಟ ರಚನೆ ಬಗ್ಗೆ ಚರ್ಚಿಸಲ್ಲ- ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟನೆ.

Promotion

ಬೆಂಗಳೂರು,ಜುಲೈ,29,2021(www.justkannada.in): ನಾಳೆ ದೆಹಲಿಗೆ ಹೋಗಿ ವರಿಷ್ಠರ ಭೇಟಿ ಮಾಡುವ ಯೋಚನೆ ಇದೆ.  ಈ ಭೇಟಿಯ ವೇಳೆ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸುವುದಿಲ್ಲ ಎಂದು ಸಿಎಂ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.jk

ಬೆಂಗಳೂರಿನಲ್ಲಿ ಇಂದು ಮಾಧ್ಯಮಗಳ  ಜತೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೆಹಲಿಯಲ್ಲಿ ವರಿಷ್ಠರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡಿದರೇ ದೆಹಲಿಗೆ ಹೋಗುತ್ತೇನೆ. ಈ ಬಾರಿ ದೆಹಲಿಯ ಭೇಟಿ ವೇಳೆಯಲ್ಲಿ ಸಚಿವ ಸಂಪುಟ ರಚನೆ ಬಗ್ಗೆ ಚರ್ಚೆ ನಡೆಸುವುದಿಲ್ಲ, ಬದಲಿಗೆ ಇನ್ನೊಂದು ಬಾರಿ ದೆಹಲಿಗೆ ಭೇಟಿ ನೀಡಿದ ವೇಳೆಯಲ್ಲಿ ಹೈಕಮಾಂಡ್‌ ಜೊತೆಗೆ ಮಾತನಾಡುವೆ  ಎಂದು ಹೇಳಿದರು.

ಉತ್ತರ ಕನ್ನಡದಲ್ಲಿ ಮಳೆಯಿಂದ ಸಾಕಷ್ಟು ಹಾನಿ ಉಂಟಾಗಿದೆ. ಮೂರು ಜನ ಮೃತಪಟ್ಟಿದ್ದಾರೆ. ಮಳೆಹಾನಿ ಸಮೀಕ್ಷೆ ಮಾಡಿ ಅಧಿಕಾರಿಗಳ ಜತೆ ಚರ್ಚಿಸುವೆ.  ಪರಿಹಾರ ಕ್ರಮಗಳ ಬಗ್ಗೆ ಚರ್ಚಿಸಿ ಕ್ರಮ ಕೈಗೊಳ್ಳುವೆ ಎಂದರು.

ಸಿಎಂ ಬಸವರಾಜ ಬೊಮ್ಮಯಿ ಇಂದು ಉತ್ತರ ಕನ್ನಡ ಜಿಲ್ಲೆಗೆ  ಪ್ರವಾಸಕ್ಕೆ ತೆರಳಿದ್ದಾರೆ.ವಿಮಾನದ ಮೂಲಕ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ಕಾರಿನ ಮೂಲಕ ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಾನಾ ಸ್ಥಳಗಳಿಗೆ ತೆರಳಿ ಮಾಹಿತಿ ಪಡೆದು ಅಧಿಕಾರಿಗಳ ಬಳಿ ಚರ್ಚೆ ನಡೆಸಲಿದ್ದಾರೆ. ಇನ್ನೂ ಅವರು ಉತ್ತರ ಕನ್ನಡ ಜಿಲ್ಲೆಗೆ ತೆರಳುವ ಮುನ್ನ ಮಾಜಿ ಸಿಎಂ ಬಿಎಸ್‌ವೈ ಅವರ ಮನೆಗೆ ಭೇಟಿ ನೀಡಿ ಚರ್ಚಿಸಿದರು.

ENGLISH SUMMARY…

“No discussion about cabinet formation during Delhi visit this time”: CM Bommai clarifies
Bengaluru, July 29, 2021 (www.justkannada.in): “I am planning to visit Delhi tomorrow and meet the party national leaders. But I won’t discuss cabinet formation in this visit,” said Chief Minister Basavaraj Bommai.
Speaking to the press reporters in Bengaluru today, he explained, “I have asked time to visit the leaders in Delhi. If they give me the time I will go to Delhi. But I won’t discuss cabinet expansion in this visit. I will visit Delhi in the coming days to discuss it with the high command.”
He also informed that there has been a lot of damage due to incessant rains in Uttar Kannada District and three persons have lost their lives. “I will visit the place and discuss with the officials concerned on providing compensation,” he informed.
Chief Minister Basavaraj Bommai will tour Uttar Kannada District today. He travels to Hubballi via air and tours Uttar Kannada by road, it is learnt.
Keywords: Chief Minister Basavaraj Bommai/ Delhi/ visit/ won’t discuss about cabinet expansion

Key words: structure – cabinet – not discussed – visit – Delhi-CM- Basavaraja Bommai