ಶ್ರೀರಾಮುಲುಗೆ ಸಚಿವ ಸ್ಥಾನ ನಿಭಾಯಿಸುವುದಕ್ಕೆ ಬರಲ್ಲ: ಕೇವಲ ಬಿಲ್ಡಪ್ ಕೊಡಲು ಮಾತ್ರ ಬರುತ್ತೆ –ಮಾಜಿ ಶಾಸಕ ವಾಗ್ದಾಳಿ…

Promotion

ಚಿತ್ರದುರ್ಗ,ಜ,10,2020(www.justkannada.in): ಶ್ರೀರಾಮುಲುಗೆ ಸಚಿವ ಸ್ಥಾನ ನಿಭಾಯಿಸುವುದಕ್ಕೆ ಬರಲ್ಲ: ಕೇವಲ ಬಿಲ್ಡಪ್ ಕೊಡಲು ಮಾತ್ರ ಬರುತ್ತೆ ಎಂದು ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಚಿತ್ರದುರ್ಗದಲ್ಲಿ ಇಂದು ಮಾತನಾಡಿದ ಮಾಜಿ ಶಾಸಕ ಎಸ್.ತಿಪ್ಪೇಸ್ವಾಮಿ, ಜನರ ಕಷ್ಟ ಸುಖ ವಿಚಾರಿಸಲು ಬಾರದ ಸಚಿವ ಶ್ರೀರಾಮುಲು ಮೊಳಕಾಲ್ಮೂರಿನಲ್ಲಿ ಪಿಎಗಳ ಮೂಲಕ ಹಣ ವಸೂಲಿ ಮಾಡುತ್ತಿದ್ದಾರೆ. ಅವರ ಜನ್ಮಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದ್ದಾರೆ.

ಶ್ರೀರಾಮುಲುಗೆ ಸಚಿವ ಸ್ಥಾನ ನಿಭಾಯಿಸುವುದಕ್ಕೆ ಬರಲ್ಲ: ಕೇವಲ ಬಿಲ್ಡಪ್ ಕೊಡಲು ಮಾತ್ರ ಬರುತ್ತೆ. ಬಳ್ಳಾರಿಯಲ್ಲಿ ಶ್ರೀರಾಮುಲು  ವರ್ಚಸ್ಸು ಬಿದ್ದುಹೋಗಿದೆ. ಮೊಳಕಾಲ್ಮೂರಿಗೆ ಹೊಟ್ಟೆಪಾಡಿಗಾಗಿ ಬಂದಿದ್ದಾರೆ. ಬರಿ ಬಿಲ್ಡಪ್ ಕೊಟ್ಟಿಕೊಂಡು ಓಡಾಡುವ ಶ್ರೀರಾಮುಲು  ನಾನು ಮಾಡಿದ ಯೋಜನೆಗಳನ್ನ ತನ್ನದು ಎಂದು ಹೇಳಿಕೊಂಡು ವೇದಿಕೆಯೇರಿ ಕೂರುತ್ತಿದ್ದಾರೆ. ಬರೀ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ ಎಂದು ತಿಪ್ಪೇಸ್ವಾಮಿ ಟೀಕಿಸಿದರು.

Key words: Sriramulu -does not – ministerial position- Buildup-former MLA