2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟ: ‘ಆ ಕರಾಳ ರಾತ್ರಿ’  ಸಿನಿಮಾಗೆ ಮೊದಲ ಅತ್ಯುತ್ತಮ ಚಿತ್ರ ಪ್ರಶಸ್ತಿ….

0
351

ಬೆಂಗಳೂರು,ಜ,10,2020(www.justkannada.in):  2018ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಯನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಇಂದು ಪ್ರಕಟಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿಎಂ ಬಿಎಸ್ ಯಡಿಯೂರಪ್ಪ  2018ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟಿಸಿದ್ದಾರೆ. ಜಿ.ಕೆ. ಶ್ರೀನಿವಾಸ್ ಗೆ ಡಾ.ರಾಜ್ ಕುಮಾರ್ ಪ್ರಶಸ್ತಿ, ಪಿ. ಶೇಷಾದ್ರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಬಿ.ಎಸ್. ಬಸವರಾಜು ಅವರಿಗೆ ಡಾ.ವಿಷ್ಣುವರ್ಧನ್ ಪ್ರಶಸ್ತಿ ಲಭಿಸಿದೆ

ಅತ್ಯುತ್ತಮ ಚಿತ್ರ, ಅತ್ಯುತ್ತಮ ನಟ, ನಟಿ ವಿವರ ಇಲ್ಲಿದೆ ನೋಡಿ…

ಮೊದಲ ಅತ್ಯುತ್ತಮ ಚಿತ್ರ – ಆ ಕರಾಳ ರಾತ್ರಿ

ಎರಡನೇ ಅತ್ಯುತ್ತಮ ಚಿತ್ರ- ರಾಮನ ಸವಾರಿ

ಮೂರನೇ ಅತ್ಯುತ್ತಮ -ಚಿತ್ರಒಂದಲ್ಲ ಎರಡಲ್ಲ

ಅತ್ಯುತ್ತಮ ಮಕ್ಕಳ ಚಿತ್ರ- ಹೂವು ಬಳ್ಳಿ

ಅತ್ಯುತ್ತಮ ನಟರಾಘವೇಂದ್ರ ರಾಜ್ ಕುಮಾರ್,

ಅತ್ಯುತ್ತಮ ನಟಿ- ಮೇಘನಾ ರಾಜ್,

ಅತ್ಯುತ್ತಮ ಪೋಷಕ ನಟ -ಬಾಲಾಜಿ ಮನೋಹರ್,

ಅತ್ಯುತ್ತಮ ಪೋಷಕ ನಟಿ -ವೀಣಾ ಸುಂದರ್.

ವಿಶೇಷ ಸಾಮಾಜಿಕ ಕಳಕಳಿ ಚಿತ್ರ- ಸಂತಕವಿ ಕನಕದಾಸರ ರಾಮಧಾನ್ಯ,

ಅತ್ಯುತ್ತಮ ಜನಪ್ರಿಯ ಮನರಂಜನಾ ಚಿತ್ರ -ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು,

ನಿರ್ದೇಶಕರ ಪ್ರಥಮ ನಿರ್ದೇಶನದ ಅತ್ಯುತ್ತಮ ಚಿತ್ರ- ಬೆಳಕಿನ ಕನ್ನಡಿ,

ಅತ್ಯುತ್ತಮ ಪ್ರಾದೇಶಿಕ ಚಿತ್ರ -ದೇಯಿ ಬೈದೇತಿ.

Key words: 2018 State Film Awards- Published –cm bs yeddyurappa