ನುಗ್ಗಿಕೇರಿ ಆಂಜನೇಯ ದೇವಸ್ಥಾನದಲ್ಲಿ  ಸಂಸದೆ ಸುಮಲತಾ ಅಂಬರೀಶ್ ರಿಂದ ವಿಶೇಷಪೂಜೆ, ತುಲಭಾರ ಸೇವೆ…

Promotion

ಧಾರಾವಾಡ,ಜೂ,15,2019(www.justkannada.in): ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಇಂದು ಧಾರವಾಡ ಹೊರವಲಯದಲ್ಲಿರುವ ನುಗ್ಗಿಕೇರಿಯ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ನಟ ದಿ. ಅಂಬರೀಶ್ ಅವರ ಸ್ನೇಹಿತ ನಾರಾಯಣ್ ಎಂಬುವವರು ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆಲುವಿಗಾಗಿ ಹರಕೆ ಹೊತ್ತಿದ್ದರು.  ತುಲಭಾರ ಸೇವೆ ಮಾಡುವುದಾಗಿ ನಾರಾಯಣ್ ಹರಕೆ ಹೊತ್ತಿದ್ದರು. ಈ ಹಿನ್ನೆಲೆ ಇಂದು  ಧಾರವಾಡದ ನುಗ್ಗಿಕೇರಿಯಲ್ಲಿನ ಆಂಜನೇಯ ದೇವಸ್ಥಾನಕ್ಕೆ ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ರೊಂದಿಗೆ ತೆರಳಿ ಸಕ್ಕರೆ, ತುಪ್ಪದ ತುಲಭಾರ ಸೇವೆ ನೆರವೇರಿಸಿದರು. ಈ ವೇಳೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಹಿರಿಯ ನಟ ದೊಡ್ಡಣ್ಣ ಉಪಸ್ಥಿತರಿದ್ದರು.

ವಿಶೇಷ ಪೂಜೆ ಬಳಿಕ ಮಾತನಾಡಿದ ಸಂಸದೆ ಸುಮಲತಾ ಅಂಬರೀಶ್, ನನ್ನ ಗೆಲುವಿಗಾಗಿ ಅಂಬರೀಶ್ ಹಲವು ಅಭಿಮಾನಿಗಳು ಹರಕೆ ಹೊತ್ತಿದ್ದರು. ಹೀಗಾಗಿ ಇಂದು ದೇವಸ್ಥಾನಕ್ಕೆ ಭೇಟಿ ನೀಡಿ ತುಲಭಾರ ಸೇವೆ ನೆರವೇರಿಸಿದ್ದೇನೆ. ಇದೇ ಮೊದಲ ಬಾರಿಗೆ ನಾನು ತುಲಭಾರ ಸೇವೆ ನಡೆಸಿದ್ದು, ಅಭಿಮಾನಿಗಳ ಆಸೆ ಪೂರೈಸಿದ್ದೇನೆ ಎಂದರು.

Key words: Special worship from MP Sumalatha Ambarish in Anjaneya Temple.

Darawad- Anjaneya Temple- Special worship – MP Sumalatha Ambarish