ಪಾಕಿಸ್ತಾನಿ ಮೂಲದ ಬಶೀರ್ ಚಾಚಾಗೆ ಟಿಕೆಟ್ ಕೊಡಿಸಿದ ಧೋನಿ !

ಲಂಡನ್, ಜೂನ್ 15, 2019 (www.justkannada.in): ಧೋನಿ ಪಕ್ಕಾ ಅಭಿಮಾನಿ ಪಾಕಿಸ್ತಾನ ಮೂಲದ ಬಶೀರ್ ಚಾಚಾ ನಾಳೆ ನಡೆಯಲಿರುವ ಭಾರತ-ಪಾಕಿಸ್ತಾನ ವಿಶ್ವಕಪ್ ಕದನಕ್ಕೆ ಹಾಜರಾಗಲಿದ್ದಾರೆ.

ಶಿಕಾಗೋ ಮೂಲದ ಬಶೀರ್ ಚಾಚಾ ಪಾಕ್ ತಂಡದ ಅಧಿಕೃತ ಅಭಿಮಾನಿಯಾಗಿದ್ದರು. ಆದರೆ ಧೋನಿಯ ಮೇಲಿನ ಪ್ರೀತಿಯಿಂದ ಚಾಚ ಈಗ ಭಾರತಕ್ಕೆ ಬೆಂಬಲ ಸೂಚಿಸುತ್ತಿದ್ದಾರೆ.

ತನ್ನ ಆರಾಧ್ಯ ದೈವ ಧೋನಿಯಿಂದ ಚಾಚನಿಗೆ ಈ ಪಂದ್ಯಕ್ಕೆ ಟಿಕೆಟ್ ಕೂಡಾ ಸಿಕ್ಕಿದೆ. ಸ್ವತಃ ಧೋನಿಯೇ ಚಾಚನಿಗೆ ಟಿಕೆಟ್ ಖರೀದಿಸಿಕೊಟ್ಟಿರುವುದು ವಿಶೇಷ. ಹೀಗಾಗಿ ನಾಳೆಯ ಪಂದ್ಯದಲ್ಲೂ ಚಾಚ ಭಾರತವನ್ನು ಬೆಂಬಲಿಸುವುದು ಬಹುತೇಕ ಖಚಿತವಾಗಿದೆ.