ವಿಶ್ವಕಪ್ ಕ್ರಿಕೆಟ್: ಇಂದು ಶ್ರೀಲಂಕಾ-ಆಸ್ಟ್ರೇಲಿಯಾ ಪಂದ್ಯ

ಲಂಡನ್, ಜೂನ್ 15, 2019 (www.justkannada.in): ಐಸಿಸಿ ವಿಶ್ವಕಪ್ 2019 ರ ಟೂರ್ನಿಯ ಇಂದಿನ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

ಓವಲ್ ನಲ್ಲಿ ನಡೆಯುವ ಮಹತ್ವದ ಪಂದ್ಯದಲ್ಲಿ ಶ್ರೀಲಂಕಾ ತಂಡ ಗೆಲ್ಲುವ ಒತ್ತಡದಲ್ಲಿದೆ. ಲಂಕಾ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡರಲ್ಲೂ ದುರ್ಬಲವಾಗಿದೆ.

ನಾಯಕ ದಿಮತ್ ಕರುಣರತ್ನೆ ಬಿಟ್ಟರೆ ಉಳಿದ ಬ್ಯಾಟ್ಸ್ ಮೆನ್ ಗಳು ಉತ್ತಮ ಪ್ರದರ್ಶನ ನೀಡದಿರುವುದು ತಂಡಕ್ಕೆ ಹಿನ್ನಡೆಯಾಗಿದೆ. ಲಂಕಾ ಸದ್ಯ ಟೂರ್ನಿಯಲ್ಲಿ 4 ಅಂಕಗಳೊಂದಿಗೆ 5 ನೇ ಸ್ಥಾನದಲ್ಲಿದೆ.

ಇನ್ನು ಆಸ್ಟ್ರೇಲಿಯಾ ತಂಡ ಆಡಿರುವ 4 ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದು ಎರಡನೇ ಸ್ಥಾನದಲ್ಲಿದೆ. ಆಸೀಸ್ ತಂಡಕ್ಕೆ ಡೇವಿಡ್ ವಾರ್ನರ್, ಸ್ಮಿತ್, ನಾಯಕ ಆಯರೋನ್ ಫಿಂಚ್ ಭರ್ಜರಿ ಫಾರ್ಮ್ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಿದೆ. ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಗೆಲ್ಲುವ ವಿಶ್ವಾಸದಲ್ಲಿದೆ.