ಹೊಸ ಮಾದರಿಯ ಶಿಕ್ಷಣ ಪದ್ದತಿಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿ-ಮೈಸೂರು ವಿವಿಯ ವಿಶೇಷ ಕಾರ್ಯಗಾರ‌‌ದಲ್ಲಿ ರಿಜಿಸ್ಟರ್ ಪ್ರೋ.ಲಿಂಗರಾಜ ಗಾಂಧಿ  ಹೇಳಿಕೆ..

ಮೈಸೂರು,ಜೂ,19,2019(www.justkannada.in): ಹೊಸ ಮಾದರಿಯ ಶಿಕ್ಷಣ ಪದ್ದತಿಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿಯಾಗುತ್ತವೆ ಎಂದು ಮೈಸೂರು ವಿವಿಯ ರಿಜಿಸ್ಟರ್ ಪ್ರೋ.ಲಿಂಗರಾಜ ಗಾಂಧಿ  ಹೇಳಿದರು.

ಮೈಸೂರು ವಿವಿಯ ಕಾಲೇಜು ಅಭಿವೃದ್ಧಿ ಮಂಡಳಿ ಹಾಗೂ ಸ್ವಯಂ ಡಿಜಿಟಲ್ ಲರ್ನಿಂಗ್ ಮಾನಿಟರಿಂಗ್ ಸೆಲ್ ವತಿಯಿಂದ ADOPTION OF UGC-MOOC’s  SWAYAM COURSES’  ಎಂಬ ಒಂದು ವಿಶೇಷ ಕಾರ್ಯಗಾರವನ್ನ ಇಂದು ಆಯೋಜಿಸಲಾಗಿತ್ತು. ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಗಾರವನ್ನ  ಮೈಸೂರು ವಿವಿ ಕುಲಪತಿ ಪ್ರೋ.ಹೇಮಂತ್ ಕುಮಾರ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ರಿಜಿಸ್ಟರ್ ಪ್ರೋ.ಲಿಂಗರಾಜ ಗಾಂಧಿ, ಹೊಸ ಮಾದರಿಯ ಶಿಕ್ಷಣ ಪದ್ದತಿಗಳು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸಹಕಾರಿ ಯಾಗುತ್ತವೆ. ಇತ್ತಿಚೀನ ದಿನಗಳಲ್ಲಿ ಸಾರ್ವಜನಿಕರಲ್ಲಿ ಹಾಗೂ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ವಿದ್ಯಾಭ್ಯಾಸದಿಂದ ಅನೇಕ ಸಾಧನೆಗಳನ್ನ ಮಾಡುತ್ತಿದ್ದಾರೆ. ಡಿಜಿಟಲಿಕರಣ ಶಿಕ್ಷಣ ಕ್ಷೇತ್ರಕ್ಕೆ ಭಾರತದಲ್ಲಿ ತಡವಾಗಿ ಬರುತ್ತಿದೆ. ವಿದ್ಯಾರ್ಥಿಗಳು ಡಿಜಿಟಲೀಕರಣದ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಈಗಾಗಲೇ ಯುಜಿಸಿ-ಎಂಒಒಸಿ  ಹೊಸ ಬಗೆಯ ಶಿಕ್ಷಣದ ಆಸಕ್ತಿ ತೋರುತ್ತಿದೆ ಅದು ಸ್ವಾಗತರ್ಹ ಎಂದರು.

Key words: Special- Workshop-  Mysore university