ಕಬ್ಬು ಬೆಳೆಗಾರರ ಸಮಸ್ಯೆ ನಿವಾರಣೆಗೆ ಕ್ರಮ: ಸಂಸದರು, ರೈತ ಮುಖಂಡರ ನಿಯೋಗಕ್ಕೆ ಕೇಂದ್ರ ಸಚಿವ ನರೇಂದ್ರ ಸಿಂಗ್ ತೂಮರ್ ಭರವಸೆ.

kannada t-shirts

ನವದೆಹಲಿ,ಡಿಸೆಂಬರ್,20,2022(www.justkannada.in): ದೇಶದ ಕಬ್ಬು ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಗಂಭೀರ ಕ್ರಮ ಕೈಗೊಳುವುದಾಗಿ, ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೂಮರ್, ವಿವಿಧ ರಾಜ್ಯಗಳ ಸಂಸದರು,ರೈತ ಮುಖಂಡರ ನಿಯೋಗಕ್ಕೆ ಭರವಸೆ ನೀಡಿದರು.

ಇಂದುವಿವಿಧ ರಾಜ್ಯಗಳ ಸಂಸದರು,ರೈತ ಮುಖಂಡರ ನಿಯೋಗ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೂಮರ್  ಅವರನ್ನ ಭೇಟಿ ಮಾಡಿದರು. ಕಬ್ಬಿನ ಎಫ್‌ ಆರ್‌ಪಿ ದರ ನಿಗದಿ ಮಾಡುವಾಗ ಸಕ್ಕರೆ ಇಳುವರಿ ಆಧಾರದಂತೆ ಹಣ ಪಾವತಿ ದಕ್ಷಿಣ ಭಾರತ ರಾಜ್ಯಗಳ ರೈತರಿಗೆ ಅನ್ಯಾಯವಾಗುತ್ತಿದೆ . ಪ್ರಸಕ್ತ ಸಾಲಿನಲ್ಲಿ 10:25ಕ್ಕೆ ಏರಿಕೆ ಮಾಡಿರುವುದು ಮತ್ತಷ್ಟು ನಷ್ಟ ಅನುಭವಿಸುವಂತಾಗಿದೆ . ಕೂಡಲೇ ಸಕ್ಕರೆ ಇಳುವರಿ ಮಾನದಂಡವನ್ನು 8.5ಕ್ಕೆ ಇಳಿಸಬೇಕು ,   ಪ್ರಸಕ್ತ ಸಾಲಿನಲ್ಲಿ 10.25 ಕೆ ಏರಿಕೆ ಮಾಡಿರುವುದರಿಂದ ದಕ್ಷಿಣ ರಾಜ್ಯಗಳ ರೈತರಿಗೆ ಕಡಿಮೆ ಇಳುವರಿ ಇರುವ ಕಾರಣ 325 ರೂ.  ನಷ್ಟ ಆಗುತ್ತಿದೆ. ಪ್ರಸಕ್ತ ಸಾಲಿನಲ್ಲಿ ಎಫ್ ಆರ್ ಪಿ ದರವನ್ನು ಕ್ವಿಂಟಲ್ ಗೆ 305 ನಿಗದಿ ಮಾಡಿರುವುದನ್ನು ಪುನರ್ ಪರಿಶೀಲನೆ ನಡೆಸಿ 350 ರೂ ಗೆ ಏರಿಕೆ ಮಾಡಬೇಕು, ರಸಗೊಬ್ಬರದ ಬೆಲೆ ಏರಿಕೆ ಕಬ್ಬು ಕಟಾವು ಸಾಗಾಣಿಕೆ ವೆಚ್ಚ, ಕಬ್ಬಿನ ಬೀಜದ ಬೆಲೆ ಏರಿಕೆಗೆ ಅನುಗುಣವಾಗಿ ಎಫ್ ಆರ್ ಪಿ ಏರಿಕೆ ಮಾಡಿಲ್ಲ ಆದ್ದರಿಂದ ಪುನರ್ ಪರಿಶೀಲಿಸಭೇಕು  ಎಂದು ಮನವಿ ಮಾಡಿದರು.

ಕಬ್ಬು ಕಟಾವು ಸಾಗಣಿಕೆ 15- 16 ತಿಂಗಳು ಆಗುತ್ತಿರುವ ಕಾರಣ ರೈತನ ಸಾಲದ ಮರುಪಾವತಿ ಅವಧಿ ಸುಸ್ತಿ ಆಗುತ್ತಿದೆ, ಕಬ್ಬಿನ ತೂಕ ಕಡಿಮೆಯಾಗುತ್ತದೆ ಆದಕಾರಣ 12 ತಿಂಗಳ ನಂತರ ವಿಳಂಬದ ಅವಧಿಗೆ ಕಟವ್ ಮಾಡುವ ಕಬ್ಬಿಗೆ ಶೇಕಡ 15 ಬಡ್ಡಿ ಸೇರಿಸಿಕೊಡಲು ಆದೇಶ ಹೊರಡಿಸಿ, ಅಥವಾ ಕಬ್ಬು ಬೆಳೆ ಸಾಲಕ್ಕೆ 20 ತಿಂಗಳ ಮರುಪಾವತಿ ಅವಧಿ ಬಡ್ಡಿ ವಿನಾಯಿತಿ ನೀಡಿ ಅವಕಾಶ ಕಲ್ಪಿಸಿ,  ಹಾಗೆಯೇ ಕಬ್ಬಿನ ಸಾಲದ ಕಂತು ಪಾವತಿ ವಿಳಂಬವಾಗುತ್ತಿರುವ ಕಾರಣ ರೈತನಿಗೆ ಸಿಬಿಲ್ ಸ್ಕೋರ್ ನಲ್ಲಿ ಸಾಲ ಸಿಗುತ್ತಿಲ್ಲ,  ಆದ್ದರಿಂದ ಕೃಷಿ ಸಾಲ ರೈತರಿಗೆ ನೀಡುವಾಗ ಸಿಬಿಲ್ ಸ್ಕೋರ್ ಮಾನದಂಡ ಕೈಬಿಡಬೇಕು ಎಂದು ರೈತಮುಖಂಡರು ಕೋರಿದರು.

ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಪರಿಶೀಲನೆ  ವರದಿ ಸಲ್ಲಿಸುವುದು ಕಾರ್ಖಾನೆಗಳೆ ಆದ ಕಾರಣ ಇಳುವರಿಯಲ್ಲಿ ಮೋಸ ತೋರಿಸುತ್ತಿದ್ದಾರೆ ರೈತರಿಗೆ ನಷ್ಟವಾಗುತ್ತಿದೆ.  ಪ್ರತಿ ರೈತರ ಹೊಲದಲ್ಲಿ ಸಕ್ಕರೆ ಇಳುವರಿ ಪರೀಕ್ಷೆ ಮಾಡಿ ರೈತನ ಸಹಿ ಪಡೆದು ನಂತರ ಕಟಾವು ಮಾಡಿಸುವ ಪದ್ಧತಿ ಜಾರಿಗೆ ತನ್ನಿ ಇದರ ಆಧಾರದಲ್ಲಿ ರೈತನಿಗೆ ಎಫ್ ಆರ್ ಪಿ ಹಣ ಕೊಡಿಸಿ, ಸಕ್ಕರೆ ನಿಯಂತ್ರಣ ಕಾಯ್ದೆ 1966ರ ಪ್ರಕಾರ ಕಬ್ಬು ಸರಬರಾಜು ಮಾಡಿದ 14 ದಿನದಲ್ಲಿ ರೈತನಿಗೆ ಹಣ ಪಾವತಿ ಆಗಬೇಕು.  ಆದರೆ ಯಾವುದೇ ಕಾರ್ಖಾನೆಗಳು ಪಾಲನೆ ಮಾಡುತ್ತಿಲ್ಲ ಆದ್ದರಿಂದ ಕಾನೂನು ತಿದ್ದುಪಡಿ ಮಾಡಿ ಈ ಕಾನೂನು ಉಲ್ಲಂಘಿಸುವ ಕಾರ್ಖಾನೆ ಮಾಲೀಕರ ವಿರುದ್ಧ ರೈತರು ಕ್ರಿಮಿನಲ್ ಮುಖದಮೆ ದಾಖಲಿಸುವ ಅಧಿಕಾರ ನೀಡಿ, ಆಗ ಕಾರ್ಖಾನೆಗಳು ಕಾನೂನು ನಿಯಮ ಪಾಲಿಸಿ ರೈತರಿಗೆ ಕಬ್ಬು ಹಣ ಪಾವತಿ ವಿಳಂಬದ ಅವಧಿಗೆ ಶೆ. 15 ಹೆಚ್ಚುವರಿ ಬಡ್ಡಿ ನಿಡುವಂತಾಗುತ್ತದೆ, ರೈತರಿಗೆ ನಷ್ಟ ತಪ್ಪುತ್ತದೆ.

ಕಬ್ಬಿನ ಎಫ್ ಆರ್ ಪಿ ದರವನ್ನು ಹಿಂದಿನ ವರ್ಷ ಕಬ್ಬು ಪೂರೈಕೆ ಮಾಡಿದ ರೈತರ ಸಕ್ಕರೆ ಇಳುವರಿ ಮಾನದಂಡವನ್ನು ಪರಿಗಣಿಸಿ, ಪ್ರಸಕ್ತ ಸಾಲಿನಲ್ಲಿ ಕಬ್ಬು ಪೂರೈಕೆ ಮಾಡಿದ ರೈತರಿಗೆ ಎಪ್ ಆರ್ ಪಿ  ಲೆಕ್ಕ ಹಾಕಿ ಹಣ ಪಾವತಿಸುವುದು ಅವೈಜ್ಞಾನಿಕವಾಗಿದೆ,ಎಪ್ ಆರ್ ಪಿ ನಿಯಮ ತಿದ್ದುಪಡಿ ಮಾಡಬೇಕು.

ಕಬ್ಬಿನ ಎಫ್ ಆರ್ ಪಿ ದರದಲ್ಲಿ ಕಟಾವು ಸಾಗಾಣಿಕೆ ವೆಚ್ಚ ಎಕ್ಸ್ ಗೇಟ್ ಆಗಿರುವ ಕಾರಣ, ಕಾರ್ಖಾನೆಗಳು ರೈತರ ಹಣದಲ್ಲಿ ಕಡಿತ ಮಾಡುವಾಗ ಯಾವುದೇ ಮಾನದಂಡವಿಲ್ಲದೆ ತಮ್ಮ ಮನ ಬಂದಂತೆ ಟನ್ ಕಬ್ಬಿಗೆ 1000 ರೂ ತನಕ ಕಡಿತ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಷ್ಟವಾಗುತ್ತಿದೆ. ಕಟಾವು ಕೂಲಿ ಸಾಗಾಣಿಕೆ ವೆಚ್ಚ ನಿಗದಿ ನಿಯಮ ರೂಪಿಸಿ, ಸುಲಿಗೆ ತಪ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೂಮರ್  ಅವರಿಗೆ ಒತ್ತಾಯಿಸಿದರು.

ನಂತರ ರಸಗೊಬ್ಬರ ರಾಜ್ಯ ಸಚಿವ ಭಗವಂತ್ ಕೂಬಾ  ಅವರನ್ನು ಶಾಸ್ತ್ರಿ ಭವನದ ಕಚೇರಿಯಲ್ಲಿ ಭೇಟಿ ಮಾಡಿ ಒತ್ತಾಯ ಪತ್ರ ಸಲ್ಲಿಸಿ ವಿವರವಾಗಿ ಚರ್ಚಿಸಲಾಯಿತು. ನಿಯೋಗದಲ್ಲಿ ಲೋಕಸಭಾ ಸದಸ್ಯರುಗಳಾದ ನಾಮ ನಾಗೇಶ್ವರ ರಾವ್ (ತೆಲಂಗಾಣ) ಏ ಗಣೇಶ ಮೂರ್ತಿ (ತಮಿಳ್ ನಾಡು), ಸುಮಲತಾ ಅಂಬರೀಶ್ (ಕರ್ನಾಟಕ) ಎಲ್ ಹನುಮಂತಯ್ಯ (ಕರ್ನಾಟಕ), ರೈತ ಮುಖಂಡರುಗಳಾದ ಕುರುಬೂರು ಶಾಂತಕುಮಾರ್, ಪರಶುರಾಮ್ ಎತ್ತಿನಗುಡ್ಡ,  ದೈವಸಿಗಾಮಣಿ, ನರಸಿಂಹ ನಾಯ್ಡು, ವೆಂಕಟೇಶ್ವರ ರಾವ್, ಸ್ವಾಸ್ತಿಸುಂದರ್ ಸಿಯಾ , ರಾಮನಗೌಡರ್, ಇಳನ್ ಗೋವನ,ಬಾಲಸುಬ್ರಹ್ಮಣ್ಯಂ, ಟಿಪಿಕೆ ರಾಜೇಂದ್ರನ್ ಮುಂತಾದವರು ಇದ್ದರು.

Key words: solve – problems – sugarcane growers -Union Minister -Narendra Singh Tumar-farmer

 

website developers in mysore