ನನಗೆ ಮತ್ತು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಭರವಸೆ ಸಿಕ್ಕಿದೆ- ಶಾಸಕ ಕೆ.ಎಸ್ ಈಶ್ವರಪ್ಪ.

ಬೆಂಗಳೂರು,ಡಿಸೆಂಬರ್,20,2022(www.justkannada.in): ನನಗೆ ಮತ್ತು ರಮೇಶ್ ಜಾರಕಿಹೊಳಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನ ಸಿಎಂ ಬಸವರಾಜ ಬೊಮ್ಮಾಯಿ ನೀಡಿದ್ದಾರೆ. ಹೀಗಾಗಿ ಅವರಿಗೆ ಧನ್ಯವಾದ ತಿಳಿಸುತ್ತೇನೆ ಎಂದು ಶಾಸಕ ಕೆ.ಎಸ್ ಈಶ್ವರಪ್ಪ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಕೆ.ಎಸ್ ಈಶ್ವರಪ್ಪ, ಅರೋಪ ಬಂದಾಕ್ಷಣ ನಾನು ರಾಜೀನಾಮೆ ನೀಡಿದೆ.  ನನ್ನ ಮೇಲಿನ ಆರೋಪಕ್ಕೆ  ಕ್ಲೀನ್ ಚಿಟ್ ಸಿಕ್ಕಿದೆ.  ಆದರೂ 4 ತಿಂಗಳಾದ್ರೂ ಸಚಿವ ಸ್ಥಾನ ಇಲ್ಲ. ಸಚಿವ ಸ್ಥಾನ ನೀಡುವುದಾಗಿ ಬಿಎಸ್ ವೈ ಮತ್ತು ನಳೀನ್ ಕುಮಾರ್ ಕಟೀಲ್ ಹೇಳಿದ್ದರು. ನನಗೆ ಸಚಿವನಾಗುವ ಆಸೆ ಇಲ್ಲ. ಆರೋಪದಿಂದ ಕ್ಲೀನ್  ಆಗಿ ಹೊರಬಂದಿದ್ದೇನೆ ಹೀಗಾಗಿ ಸಚಿವ ಸ್ಥಾನ ಕೇಳುತ್ತಿದ್ದೇನೆ ಎಂದರು.

ಸಚಿವ ಸಂಪುಟ ಸೇರ್ಪಡೆ ಭರವಸೆ ಸಿಕ್ಕಿದೆ.  ಹಾಗಾಗಿ ಸಿಎಂ ಬೊಮ್ಮಾಯಿಗೆ ಧನ್ಯವಾದ ಹೇಳುತ್ತೇನೆ. ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ. ತಮ್ಮ ಜೊತೆಗೆ ರಮೇಶ್ ಜಾರಕಿಹೊಳಿ ಅವರನ್ನೂ ಸಂಪುಟಕ್ಕೆ ಮತ್ತೆ ಸೇರಿಸಿಕೊಳ್ಳುವ ಭರವಸೆ ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಸಿಕ್ಕಿದೆ. ಹಾಗಾಗಿ ಸದ್ಯಕ್ಕೆ ಯಾವುದೇ ಕಠಿಣ ನಿರ್ಧಾರ ತೆಗೆದುಕೊಳ್ಳುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.

Key words: Me – Ramesh Jarakiholi –ministership- MLA -KS Eshwarappa.