ಜ.5ರಿಂದ 224 ಕ್ಷೇತ್ರಗಳ ಅಭ್ಯರ್ಥಿಗಳ ಮೇಲೆ ಐಟಿ ,ಇಡಿ ರೇಡ್ ಮಾಡಿಸಲು ಬಿಜೆಪಿ ಸಿದ್ಧತೆ- ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಗಂಭೀರ ಆರೋಪ.

ಮೈಸೂರು,ಡಿಸೆಂಬರ್,20,2022(www.justkannada.in): ಕರ್ನಾಟಕದಲ್ಲಿ ಬಿಜೆಪಿ ಆಟ ಶುರು ಮಾಡಿದ್ದಾರೆ. ಜನವರಿ 5 ರಿಂದ 224 ಕ್ಷೇತ್ರಗಳ ಅಭ್ಯರ್ಥಿಗಳ ಹಿಂದೆ ಐಟಿ, ಇಡಿ ರೈಡ್ ಮಾಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಕೆಪಿಸಿಸಿ ರಾಜ್ಯ ವಕ್ತಾರ ಎಂ.ಲಕ್ಷ್ಮಣ್  ಸ್ಪೋಟಕ ಮಾಹಿತಿ ಹೊರ ಹಾಕಿದರು.

ಮೈಸೂರಿನಲ್ಲಿ ಸುದ‍್ಧಿಗೋಷ್ಠಿ ನಡೆಸಿ ಮಾತನಾಡಿದ ಎಂ.ಲಕ್ಷ್ಮಣ್,  ಡಿ.ಕೆ ಶಿವಕುಮಾರ್ ಅವರ ಮೇಲೆ 17 ಬಾರಿ ರೇಡ್ ಮಾಡಿದ್ದಾರೆ. 37 ಬಾರಿ ಸಮನ್ಸ್ ನೀಡಿದ್ದಾರೆ. ಬಿಜೆಪಿ ಅವರ ಉದ್ದೇಶ 2023 ಚುನಾವಣೆ ದೃಷ್ಟಿಯಿಂದ ನಾಲ್ಕು ಹಂತದಲ್ಲಿ ಅಧಿಕಾರಕ್ಕೆ ಬರಲು ತಯಾರಿ ನಡೆಸಿದ್ದಾರೆ. ಐಟಿ, ಇಡಿ ರೇಡ್ ಮಾಡಿಸಿ ಪಕ್ಷಕ್ಕೆ ಕರೆತರಲು ಪ್ಲ್ಯಾನ್ ಮಾಡಿದ್ದಾರೆ. 2014 ರಿಂದ 2022 ರವೆಗೆ 124 ರಾಜಕೀಯ ಪ್ರಮುಖರ ಮೇಲೆ ರೈಡ್ ಮಾಡಿಸಿದ್ದಾರೆ. ವಿರೋಧ ಪಕ್ಷದ ನಾಯಕರ ಮೇಲೆ ದಾಳಿ ಮಾಡಿಸಿದ್ದಾರೆ. 96% ರಷ್ಟು ವಿರೋಧ ಪಕ್ಷಗಳ‌ ಮೇಲೆ ದಾಳಿ ಮಾಡಿಸಿದ್ದಾರೆ. ಈ ಬಗ್ಗೆ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮಾಹಿತಿ ನೀಡಿದ್ದಾರೆ.

2014 ರಿಂದ 2022 ರವರೆಗೆ ಇಡಿ 5400 ಕೇಸ್ ದಾಖಲು ಮಾಡಿದ್ದಾರೆ. 23 ಜನರ ಮೇಲೆ ಮಾತ್ರ ಪ್ರಕರಣ ದಾಖಲಾಗಿದೆ. ಇಡಿ ಸುಖಾಸುಮ್ಮನೆ ದಾಳಿ ಮಾಡುತ್ತಿದ್ದಾರೆ.  ಕಾಂಗ್ರೆಸ್ ಪಕ್ಷದ 21 ಮುಖಂಡರ ಮೇಲೆ ಇಡಿ ದಾಳಿ ಮಾಡಲು ಸಿದ್ದತೆ ನಡೆಸಿದ್ದಾರೆ.  8 ರಿಂದ 9 ಶಾಸಕರು ಸಹ ಇದ್ದಾರೆ. ನೀವು ಬಿಜೆಪಿಗೆ ಬನ್ನಿ ನಿಮ್ಮನ್ನ ಟಚ್ ಮಾಡಲ್ಲ ಎಂದು ಇಡಿಯೇ ಕನ್ವಿನ್ಸ್ ಮಾಡುತ್ತಿದೆ.  ರಾಜ್ಯಕ್ಕೆ 300 ಐಟಿ ಅಧಿಕಾರಿಗಳು ಅಕ್ಕ ಪಕ್ಕದ ರಾಜ್ಯದಿಂದ ಬಂದಿದ್ದು, ನಮ್ಮ ಅಭ್ಯರ್ಥಿಗಳ ಸುತ್ತ ಅವರ ಚಲನವಲವನ್ನ ಗಮನಿಸಿದ್ದಾರೆ. 1200 ಆರ್ ಎಸ್ ಎಸ್ ಕಾರ್ಯಕರ್ತರು ಬಂದಿದ್ದು, ಇಡಿ ಅಧಿಕಾರಿಗಳಿಗೆ ಸಹಾಯ ಮಾಡುತ್ತಿದ್ದಾರೆ. ಪ್ರಮುಖ ಮುಖಂಡರಗಳ ಫೋನ್ ಟ್ಯಾಪಿಂಗ್ ಕೂಡ ಆಗುತ್ತಿದೆ  ಎಂದು ಎಂ.ಲಕ್ಷ್ಮಣ್ ಗಂಭೀರ ಆರೋಪ ಮಾಡಿದರು.

ಈ‌ ಬಾರಿ ಕಾಂಗ್ರೆಸ್ ಪಕ್ಷದವರನ್ನ ಜೈಲಿನಲ್ಲಿನಟ್ಟರೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತೆ. ಒಕ್ಕಲಿಗ ಸಮುದಾಯಕ್ಕೆ ಸ್ವಾಭಿಮಾನ ಇದ್ದರೆ ನಿಮ್ಮ ಸಮುದಾಯದ ನಾಯಕನಿಗೆ ಆಗುತ್ತಿರುವ ಕಿರುಕುಳದ ವಿರುದ್ದ ಧ್ವನಿ ಎತ್ತಿ. ಯಡಿಯೂರಪ್ಪ ಅವರ ಹಿಂದೆ ಮುಂದೆ ಇರುವ ಗನ್ ಮ್ಯಾನ್ ನಲ್ಲಿ ಒಬ್ಬ ಇ.ಡಿ ಅಧಿಕಾರಿ. ಯಡಿಯೂರಪ್ಪರನ್ನು ಇ.ಡಿ ಯ ಗನ್ ಪಾಯಿಂಟ್ ನಲ್ಲಿ ಇಡಲಾಗಿದೆ. ಈ ಮೂಲಕ ಯಡಿಯೂರಪ್ಪ ಮತ್ತು ಅವರ ಕುಟುಂಬಕ್ಕೆ ಬಿಜೆಪಿ ಕಿರುಕುಳ ನೀಡುತ್ತಿದೆ. ಯಡಿಯೂರಪ್ಪಗೆ ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ. ಲಿಂಗಾಯತ ಸಮುದಾಯ ಇದನ್ನು ಅರ್ಥ ಮಾಡಿಕೊಳ್ಳಬೇಕು. ಕುರುಬ ಸಮುದಾಯವೂ ಕೂಡ ಸಿದ್ದರಾಮಯ್ಯ ಅವರ ಮೇಲೆ ಆಗುತ್ತಿರುವ ಹೇಳಿಕೆಗಳ ದಾಳಿ ವಿರುದ್ದ ಧ್ವನಿ ಎತ್ತಬೇಕು ಎಂದು ಎಂ.ಲಕ್ಷ್ಮಣ್ ಹೇಳಿದರು.

ಯಡಿಯೂರಪ್ಪ ಅವರು ಮೋದಿ, ಅಮಿತ್ ಷಾ ನೇತೃತ್ವದಲ್ಲಿ ಬಿಜೆಪಿ 150 ಗೆಲ್ಲುತ್ತೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ,ಡಿಕೆ ಶಿವಕುಮಾರ್. ರಾಹುಲ್ ಗಾಂಧಿ ವಿರುದ್ಧ ಬೈಯ್ಯುವ ಕೆಲಸ ಮಾಡಿಸುತ್ತಿದ್ದಾರೆ. ನಾವು ಬಿಜೆಪಿ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ ಎಂದು ಯಡಿಯೂರಪ್ಪ ಹೇಳಬೇಕು.  ಅ ತರಹ ಹೇಳಿಕೆ ನೀಡುವಂತೆ ಇಡಿ ಮೂಲಕ ಯಡಿಯೂರಪ್ಪ ಅವರಿಗೆ ಗನ್ ಪಾಯಿಂಟ್ಸ್ ಮಾಡಿ ಹೇಳಿಸುತ್ತಿದ್ದಾರೆ.

ನಾವು ಅಧಿಕಾರಕ್ಕೆ ನಿಮ್ಮನ್ನು ಎಲ್ಲರನ್ನೂ ಜೈಲಿಗೆ ಹಾಕುತ್ತೇವೆ. ಡಿಕೆ ಶಿವಕುಮಾರ್ ಅವರ ಜಾಸ್ತಿ ದುಪ್ಪಟ್ಟು, ಹತ್ತು ಜಾಸ್ತಿಯಿದೆ. ಅಮಿತ್ ಷಾ ರವರ ಮಗ ಕೆಂಪಲ್ ಎಂಟರ್ಪ್ರೈಸ್  ನಡೆಸುತ್ತಾರೆ. ಅದರ ವಹಿವಾಟು ವರ್ಷಕ್ಕೆ ೬೩೦೦ಕೋಟಿ,ಈಗ ೧೩೦೦೦ಕೋಟಿ ಆಗಿದೆ ಅವರ ಮೇಲೆ ರೈಡ್ ಮಾಡುತ್ತಿಲ್ಲ ಶ್ರೀನಿವಾಸ್ ಪ್ರಸಾದ್ ಅವರು ವಿಶ್ವ ನಾಥ್  ೧೫ಕೋಟಿ ತೆಗೆದುಕೊಂಡಿದ್ದಾರೆ ಎಂದು ಹೇಳುತ್ತಾರೆ ಅದನ್ನು ಸಿಬಿಐಗೆ ಯಾಕೆ ನೀಡಲಿ. ಬಸವನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಲ್ಲಿ ಸಿಎಂ ಆಗಲು ೨೫೦೦ ಕೊಟಿ ಮಂತ್ರಿಗೆ ೧೫೦ ಕೋಟಿ ಯಡಿಯೂರಪ್ಪ ೨೫ ಕೋಟಿ ನೀಡಬೇಕು ಎಂದು ಹೇಳುತ್ತಾರೆ ಇದರ ಬಗ್ಗೆ ಸಿಬಿಐ ರವರು ಯಾಕೆ ರೈಡ್ ಮಾಡಲಿಲ್ಲ. ರಾಜ್ಯದಲ್ಲಿ ವೈಸ್ ಚಾನ್ಸೆಲರ್ ಆಗಬೇಕೆಂದರೆ  5ಕೋಟಿ ನೀಡಬೇಕು. ವಿಟಿಯು ವೈಸ್ ಚಾನ್ಸೆಲರ್ ಗೆ 15ಕೋಟಿ ನೀಡಬೇಕು ಈ ಬಗ್ಗೆ ಲೋಕಾಯುಕ್ತಾಗೆ ದೂರು ನೀಡುತ್ತೇವೆ ಎಂದು ಎಂ. ಲಕ್ಷ್ಮಣ್ ತಿಳಿಸಿದರು.

ಒಂದು ಸೆಂಟೆನ್ಸ್ ಇಂಗ್ಲಿಷ್ ಬರೆಯಲಿಕ್ಕೆ ಬಾರದವರು ಕೆಸೆಟ್ ಬರೆದು ಅಸಿಸ್ಟೆಂಟ್ ಪ್ರೊಪೆಸರ್  ಆಗುತ್ತಿದ್ದಾರೆ ಎಂದು ನಿಮ್ಮ ಸಂಸದರಾದ ಪ್ರತಾಪ್ ಸಿಂಹ ಹೇಳುತ್ತಾರೆ.  ಈ ಬಗ್ಗೆ ಉತ್ತರ ಕೊಡಿ ಬಸವರಾಜ ಬೊಮ್ಮಾಯಿಯವರೇ. ಪ್ರತಾಪ್ ಸಿಂಹ ಮಾತನಾಡಿರುವ ಈ ಅಡಿಯೋ ನನ್ನ ಬಳಿ ಇದೆ. ಅಧಿಕಾರಕ್ಕೆ ಯಾವ ಲೆವೆಲ್ ಗೆ ಹೋಗುತ್ತಾರೆ ಎಂಬುದಕ್ಕೆ ಇದೇ ಸಾಕ್ಷಿ . ಇವರನ್ನು ಅಧಿಕಾರದಿಂದ ಕಿತ್ತು ಹಾಕಿ. ಅವನು ಯಾರೋ ಒಬ್ಬ(ಬಿಜೆಪಿ ಯುವ ಮೋರ್ಚಾದ ನಗರಾದ್ಯಕ್ಷ ಕಿರಣ್ ಗೌಡ) ನಾಯಿಯನ್ನು ನಮ್ಮ ವಿರುದ್ಧ ಬೊಗಳಲಿಕ್ಕೆ ಬಿಡುತ್ತಿದ್ದೀರಾ. ಗೂಂಡಾ ಪ್ರವೃತ್ತಿ ಹೊಂದಿರುವವರ ಮೂಲಕ ಎದುರಿಸುವ ಕೆಲಸ ಮಾಡಬೇಡಿ. ಪ್ರತಾಪ್ ಸಿಂಹ ಅಂಡ್ ಗೂಂಡಾಗಳ ವಿರುದ್ಧ ನಾನು ಪೋಲಿಸ್ ಆಯುಕ್ತರಿಗೆ ದೂರು ನೀಡುತ್ತೇನೆ ಎಂದು ಎಂ ಲಕ್ಷಣ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

Key words: BJP-preparing – IT –ED- raids – candidates -KPCC spokesperson- M. Laxman.