ಕಾಂಗ್ರೆಸ್ ನಿಂದ ಜಾತಿ ಹೆಸರಲ್ಲಿ ಸಮಾಜ ಒಡೆಯುವ ಕೆಲಸ-ಡಿಸಿಎಂ ಅಶ್ವಥ್ ನಾರಾಯಣ್ ಕಿಡಿ….

Promotion

ಬೆಂಗಳೂರು,ಸೆ,12,2019(www.justkannada.in):  ಜಾತಿ ಹೆಸರಲ್ಲಿ ಕಾಂಗ್ರೆಸ್ ಸಮಾಜವನ್ನ ಒಡೆಯುವ ಕೆಲಸ ಮಾಡುತ್ತಿದೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಕಿಡಿಕಾರಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ನಿನ್ನೆ ನಡೆದ ಪ್ರತಿಭಟನೆಯಲ್ಲಿ ಡಿ.ಕೆ ಶಿವಕುಮಾರ್ ಹಿತೈಷಿಗಳು, ಬೆಂಬಲಿಗರು, ಕಾಂಗ್ರೆಸ್ ನಾಯಕರೇ ಇದ್ದರು. ಹೀಗಾಗಿ ನಿನ್ನೆಯ ಹೋರಾಟ ಒಕ್ಕಲಿಗ ಸಮುದಾಯದ ಹೋರಾಟದಂತೆ ಕಾಣಲಿಲ್ಲ ಎಂದು ಲೇವಡಿ ಮಾಡಿದರು.

ಹಾಗೆಯೇ ಕಾಂಗ್ರೆಸ್ ವಿರುದ್ದ ವಾಗ್ದಾಳಿ ನಡೆಸಿದ ಡಿಸಿಎಂ ಅಶ್ವಥ್ ನಾರಾಯಣ್, ಕಾಂಗ್ರೆಸ್ ಜಾತಿ ಹೆಸರಿನಲ್ಲಿ ಸಮಾಜ ಒಡೆಯುವ ಕೆಲಸ ಮಾಡುತ್ತಿದ್ದಾರೆ.  ಅವರು ತಮ್ಮ ಅನುಕೂಲಕ್ಕೆ ರಾಜಕಾರಣ ಮಾಡುವುದು ಬೇಡ.  ಜನರಿಗೋಸ್ಕರ ರಾಜಕಾರಣ ಮಾಡಲಿ. ಜಾತಿಗೆ ಕಳಂಕ ತರುವ ಕೆಲಸ ಮಾಡಬಾರದು.  ಜಾತಿಯನ್ನ ಮೀರಿ ಸಮಾಜ ಕಟ್ಟುವ ಕೆಲಸ ಆಗಲಿ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.

Key words: Social – caste -name – Congress-DCM -Ashwath Narayan