ಲಾಂಗ್ ಹಿಡಿದು ರಸ್ತೆಯಲ್ಲಿ ಓಡಾಡಿ ಕೊಲೆ ಬೆದರಿಕೆ ಹಾಕಿದ ಗ್ರಾ.ಪಂ ಸದಸ್ಯನ ಸಹೋದರ…..

ಕೋಲಾರ,ಸೆ,12,2019(www.justkannada.in): ಗ್ರಾಮಪಂಚಾಯಿತಿ ಸದಸ್ಯನ ಸಹೋದರನೊಬ್ಬ ಲಾಂಗ್ ಹಿಡಿದು ರಸ್ತೆಯಲ್ಲಿ ಓಡಾಡಿ ವ್ಯಕ್ತಿಯೊಬ್ಬರಿಗೆ ಕೊಲೆ ಬೆದರಿಕೆ ಹಾಕಿದ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.

ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಸಕ್ಕನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂತೋಷ್ ರೆಡ್ಡಿ ಲಾಂಗ್ ಹಿಡಿದು ಓಡಾಡಿ ಕೊಲೆ ಬೆದರಿಕೆ ಹಾಕಿದ ವ್ಯಕ್ತಿ, ಬಂಗಾರಪೇಟೆಯ ಮಾಗೊಂದಿ ಗ್ರಾಮ ಪಂಚಾಯ್ತಿ ಸದಸ್ಯ ಸೋಮಶೇಖರ ರೆಡ್ಡಿ ಸಹೋದರನಾಗಿರುವ ಸಂತೋಷ್ ರೆಡ್ಡಿ, ಕುಪೇಂದ್ರ ಎನ್ನುವರೊಂದಿಗೆ  ಕಾಮಗಾರಿ ಟೆಂಡರ್ ವಿಚಾರವಾಗಿ ಜಗಳವಾಡಿ ಗಲಾಟೆ ಮಾಡಿದ್ದನು.

ಈ ಹಿಂದೆ ಕಾಮಗಾರಿ ಗುತ್ತಿಗೆ ವಿಚಾರವಾಗಿ ಸಂತೋಷ್ ರೆಡ್ಡಿ ಮತ್ತು ಕುಪೇಂದ್ರ ಇಬ್ಬರು ಗಲಾಟೆ ಮಾಡಿಕೊಂಡಿದ್ದರು. ಇದೀಗ ಸಂತೋಷ್ ರೆಡ್ಡಿ ಲಾಂಗ್ ಹಿಡಿದು ಗ್ರಾಮದ ರಸ್ತೆಯಲ್ಲಿ ಓಡಾಡಿ ಬೆದರಿಕೆ ಹಾಕಿದ್ದು ವಿಡಿಯೋ ಇದೀಗ ಸಾಮಾಜಿಕ ಜಾಲಾ ತಾಣಗಳಲ್ಲಿ ಪುಲ್  ವೈರಲ್ ಆಗಿದೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Key words: kolar-Long -threatened –murder-person