ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿಕೆ ನೇತೃತ್ವದಲ್ಲಿ ಚಿಂತನ ಮಂತನ ಸಭೆ: ಶಾಸಕ ಜಿ.ಟಿ ದೇವೇಗೌಡ ಗೈರು…

ಮೈಸೂರು,ಸೆ,12,2019(www.justkannada.in): ಸಮ್ಮಿಶ್ರ ಸರ್ಕಾರ ಪತನದ ಬಳಿಕ ಜೆಡಿಎಸ್ ಹಲವು ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಂಡಿದ್ದ ಮಾಜಿ ಸಚಿವ ಜಿ.ಟಿ ದೇವೇಗೌಡರು ಇದೀಗ ತವರು ಜಿಲ್ಲೆಮೈಸೂರಿನಲ್ಲೇ ನಡೆಯುತ್ತಿರುವ ಚಿಂತನ ಮಂತನ ಸಭೆಗೆ ಗೈರಾಗಿದ್ದಾರೆ.

ಮೈಸೂರಿನಲ್ಲಿ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ನೇತೃತ್ವದಲ್ಲಿ  ಚಿಂತನ ಮಂತನ ಸಭೆ ನಡೆಯುತ್ತಿದ್ದು , ಸಭೆಗೆ ಶಾಸಕ  ಜಿಟಿ ದೇವೇಗೌಡರು ಗೈರಾಗಿದ್ದಾರೆ. ಹೆಚ್,ಡಿ ಕುಮಾರಸ್ವಾಮಿ ಅವರ ಜೊತೆ ಮಾಜಿ ಸಚಿವ ಸಾ. ರಾ  ಮಹೇಶ್,  ಶಾಸಕ ಅಶ್ವಿನ್ ಕುಮಾರ್ ವೇದಿಕೆ  ಹಂಚಿಕೊಂಡಿದ್ದಾರೆ.

ಜಿ.ಟಿ.ದೇವೇಗೌಡರ ಜತೆ  ಕೆ.ಮಹದೇವು ಸಹ ಗೈರಾಗಿದ್ದು . ಮೈಸೂರಿನಲ್ಲಿ 5 ಜೆಡಿಎಸ್ ಶಾಸಕರಿದ್ರು ಇಬ್ಬರು ಮಾತ್ರ ಸಭೆಗೆ ಹಾಜರಾಗಿದ್ದಾರೆ. ಇನ್ನು ಕೇವಲ ಬೆರಳೆಣಿಕೆಯಷ್ಟು ಕಾರ್ಯಕರ್ತರು ಮುಖಂಡರು ಮಾತ್ರ ಸಭೆಗೆ ಆಗಮಿಸಿದ್ದು ಹೆಚ್.ಡಿ ಕುಮಾರಸ್ವಾಮಿ ಬಂದರೂ ಜೆಡಿಎಸ್‌ ಸಭೆಯಿಂದ ಜಿಟಿ ದೇವೇಗೌಡರು ದೂರ ಉಳಿದಿದ್ದಾರೆ.

ಇತ್ತೀಚೆಗೆ ಜಿ.ಟಿ ದೇವೇಗೌಡರು ಜೆಡಿಎಸ್ ನಾಯಕರ ವಿರುದ್ದ ಅಸಮಾಧಾನ ಹೊರ ಹಾಕಿದ್ದರು.

Key words: chinthana-manthana-meeting – Mysore  -former minister-GT Deve Gowda