ಸಿದ್ದರಾಮಯ್ಯ ರಾಷ್ಟ್ರರಾಜಕಾರಣಕ್ಕೆ ಹೋಗಬೇಕು: ಅಚ್ಚರಿ ಹೇಳಿಕೆ ನೀಡಿದ ಹೆಚ್.ಡಿ ದೇವೇಗೌಡರು.

Siddaramaiah- should go - national politics-former PM-HD Deve Gowda
Promotion

ನವದೆಹಲಿ,ಮಾ,1,2021(www.justkannada.in):  ವಿಧಾನಸಭೆ ವಿಪಕ್ಷ ನಾಯಕ ಸಿದ್ಧರಾಮಯ್ಯ ಬಗ್ಗೆ ಜೆಡಿಎಸ್ ವರಿಷ್ಢ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಅಚ್ಚರಿಯ ಹೇಳಿಕೆಯೊಂದನ್ನ ನೀಡಿದ್ದಾರೆ.jk

ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣಕ್ಕೆ ಹೋಗಬೇಕು. ರಾಷ್ಟ್ರ ಕಾಂಗ್ರೆಸ್  ಗೆ ಸಿದ್ಧರಾಮಯ್ಯನಂತವರ ಅವಶ್ಯಕತೆ ಇದೆ ಎಂದು  ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ಇಂದು ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು, ‘ರಾಹುಲ್ ಗಾಂಧಿ ಅವರ ಕೈ ಬಲಪಡಿಸಲು ಸಿದ್ದರಾಮಯ್ಯ ಅವರಂತಹ ನಾಯಕರು‌ ರಾಷ್ಟ್ರ ರಾಜಕಾರಣಕ್ಕೆ ಬರಬೇಕು ಎಂದರು.Siddaramaiah- should go - national politics-former PM-HD Deve Gowda

ಮೈಸೂರು ಮೇಯರ್ ಚುನಾವಣೆ  ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ದೇವೇಗೌಡರು, ಸಿದ್ಧರಾಮಯ್ಯ ನಮ್ಮನ್ನ ಲೆಕ್ಕಕ್ಕೆ ಇಟ್ಟಿಕೊಳ್ಳಲಿಲ್ಲ.ಈ ಬಾರಿ ಮೇಯರ್ ಸ್ಥಾನ ಬಿಟ್ಟುಕೊಡಲು ಹೇಳಿದ್ದೆ.  ಮುಂದಿನ 2 ವರ್ಷ ನಾವೇ ಮೇಯರ್ ಸ್ಥಾನ ಇಟ್ಟುಕೊಳ್ಳೋಣ ಎಂದಿದ್ದೆ. ಆದರೆ ಜೆಡಿಎಸ್ ಸದಸ್ಯರನ್ನ ಅಪರೇಷನ್ ಮಾಡಲು ಯತ್ನಿಸಿದರು.  ಅದರೆ ಅವರು ಅದರಲ್ಲಿ ಸಕ್ಸಸ್ ಆಗಲಿಲ್ಲ. ಹೆಚ್.ಡಿ ಕುಮಾರಸ್ವಾಮಿ ಅಲ್ಲೇ ಇದ್ದ ಕಾರಣ ಅದು ಆಗಲಿಲ್ಲ ಎಂದರು.

Key words: Siddaramaiah- should go – national politics-former PM-HD Deve Gowda