70 ವರ್ಷದ ನನಗೇಕೆ ಕೊರೋನಾ ಲಸಿಕೆ..? ಯುವಜನರಿಗೆ ನೀಡಿ- ಮಲ್ಲಿಕಾರ್ಜುನ ಖರ್ಗೆ…

ನವದೆಹಲಿ, ಮಾರ್ಚ್,1,2021(www.justkannada.in):  ನನಗೆ 70 ವರ್ಷ ವಯಸ್ಸಾಗಿದೆ. ನಾನು  ಇನ್ನೂ 10ರಿಂದ 15 ವರ್ಷದ ವರ್ಷ ಬದುಕಬಹುದು ಅಷ್ಟೇ. ನನಗೆ ಏಕೆ ಕೊರೋನಾ ಲಸಿಕೆ. ಹಲವು ಕಾಲ ಬಾಳಿ ಬದುಕಬೇಕಾದ ಯುವಜನರಿಗೆ ಕೊರೋನಾ ಲಸಿಕೆ ನೀಡಿ ಎಂದು ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.jk

ಇಂದಿನಿಂದ ಕೊರೋನಾ ಲಸಿಕೆ ಅಭಿಯಾನದ  3ನೇ ಹಂತಕ್ಕೆ ಚಾಲನೆ ಸಿಕ್ಕಿದ್ದು, ಹಿರಿಯ ನಾಗರಿಕರಿಗೆ ಸರ್ಕಾರ ಲಸಿಕೆ ನೀಡಲು ಆರಂಭಿಸಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು, ಮೊದಲು ಯುವಜನತೆಗೆ ಈ ಲಸಿಕೆಯನ್ನು ನೀಡಬೇಕು  ಎಂದು ಸಲಹೆ ನೀಡಿದ್ದಾರೆ.70-year-old-coronavirus-vaccine-young-people-mallikarjuna-kharge

ನಾನು 70 ವರ್ಷ ಮೇಲ್ಪಟ್ಟ ವಯಸ್ಸಿನವನಾಗಿದ್ದೇನೆ. ನನ್ನ ಬದಲಾಗಿ, ಇನ್ನು ಹಲವು ಕಾಲ ಬಾಳಿ ಬದುಕಬೇಕಾದ ಯುವಜನರಿಗೆ ನೀವು ಅದನ್ನು (Covid-19 ಲಸಿಕೆ) ನೀಡಬೇಕು. ನನಗೆ ಇನ್ನೂ 10ರಿಂದ 15 ವರ್ಷ ಬದುಕಿದೆ ಅಷ್ಟೇ’ ಎಂದು  ಮಲ್ಲಿಕಾರ್ಜುನ ಖರ್ಗೆ ಹೇಳಿದರು.

Key words: 70 year- old –coronavirus- vaccine-young people-Mallikarjuna kharge