ವಿಜಯಪುರ ವಿಮಾನ ನಿಲ್ದಾಣ ಕಾಮಗಾರಿ ಶೀಘ್ರವಾಗಿ ಪೂರ್ಣ : ಡಿಸಿಎಂ ಗೋವಿಂದ ಕಾರಜೋಳ ವಿಶ್ವಾಸ ….

ವಿಜಯಪುರ, ಮಾರ್ಚ್.1,2021(www.justkannada.in): ವಿಜಯಪುರ ವಿಮಾನ  ನಿರ್ಮಾಣ ಕಾಮಗಾರಿಯು ಉತ್ತಮ ಗುಣಮಟ್ಟದೊಂದಿಗೆ ವೇಗವಾಗಿ ನಡೆಯುತ್ತಿದ್ದು, ನಿಗಧಿತ ಅವಧಿಗಿಂತ ಮುಂಚಿತವಾಗಿ ಪೂರ್ಣಗೊಳ್ಳಲಿದೆ ಎಂದು ಉಪಮುಖ್ಯಮಂತ್ರಿಗಳಾದ  ಗೋವಿಂದ ಎಂ ಕಾರಜೋಳ ಅವರು ತಿಳಿಸಿದರು.jk

ವಿಮಾನ ನಿಲ್ದಾಣ ಕಾಮಗಾರಿ ಪರಿಶೀಲನೆ ನಡೆಸಿದ ಡಿಸಿಎಂ ಗೋವಿಂದ ಕಾರಜೋಳ,  95 ಕೋಟಿ ರೂ ವೆಚ್ಚದಲ್ಲಿ ಮೊದಲ ಹಂತದ  ಕಾಮಗಾರಿಯು ತ್ವರಿತವಾಗಿ ನಡೆಯುತ್ತಿದ್ದು, ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿರುವುದು ತೃಪ್ತಿಕರ ಸಂಗತಿಯಾಗಿದೆ. 2ನೇ ಹಂತದ‌ ಕಾಮಗಾರಿಯು  125 ಕೋಟಿ ರೂ ವೆಚ್ವದಲ್ಲಿ ನಡೆಯಲಿದೆ ಎಂದು ತಿಳಿಸಿದರು.vijayapur-airport-works-soon-full-dcm-govinda-karajola

ನಂತರ ಡೂಪ್ಲೆಕ್ಸ್ ಕೋರ್ಟ್ ನಿರ್ಮಾಣ  ಕಾಮಗಾರಿಯನ್ನು ಪರಿಶೀಲಿದ ಅವರು, ಈ‌ ಕಾಮಗಾರಿಯು ಪೂರ್ಣಪ್ರಮಾಣದಲ್ಲಿ  ಪೂರ್ಣಗೊಂಡಿದ್ದು,  ಕಂಪ್ಯೂಟರ್ ಜೋಡಣೆ, ಇಂಟರ್ ನೆಟ್ ಸಂಪರ್ಕ ಕಾಮಗಾರಿಯು ನಡೆಯುತ್ತಿದೆ. ಈ  ಕಾಮಗಾರಿಯ ಗುಣಮಟ್ಟ‌ ಹಾಗೂ ಕಟ್ಟಡ ವಿನ್ಯಾಸಕ್ಕೆ ಡಿಸಿಎಂ ಗೋವಿಂದ ಕಾರಜೋಳ  ಮೆಚ್ಚುಗೆ ವ್ಯಕ್ತಪಡಿಸಿದರು.

Key words: Vijayapur- Airport –Works- Soon- Full-DCM -Govinda Karajola