ಸಿದ್ಧರಾಮಯ್ಯ ಮತ್ತು ಡಿಕೆಶಿ ವಿರುದ್ಧ ಅವಹೇಳನಕಾರಿ ಸಂಭಾಷಣೆ: ದೊಡ್ಡಮಟ್ಟದ ಹೋರಾಟಕ್ಕೆ ಮುಂದಾದ ಸ್ವಾಭಿಮಾನಿ ಹೋರಾಟ ಸಮಿತಿ

Promotion

ಮೈಸೂರು,ಜನವರಿ,7,2023(www.justkannada.in): ರಂಗಾಯಣದ ನಾಟಕದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್  ವಿರುದ್ದ ಅವಹೇಳನಕಾರಿ  ಸಂಭಾಷಣೆ ಬಳಕೆ ಹಿನ್ನಲೆ‌ ಸ್ವಾಭಿಮಾನಿ ಹೋರಾಟ ಸಮಿತಿ ದೊಡ್ಡ ಮಟ್ಟದ ಹೋರಾಟಕ್ಕೆ ಚಿಂತನೆ ನಡೆಸಿದೆ.

ಇಂದು ನಗರದ ಪುರಭವನದಲ್ಲಿ ಹೋರಾಟದ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಪಕ್ಷಾತೀತವಾಗಿ ವಿವಿಧ ಮುಖಂಡರುಗಳು ಭಾಗಿಯಾಗಿದ್ದರು. ಜನವರಿ 10 ರಂದು ಬೆಳಿಗ್ಗೆ 10 ರ ವೇಳೆಗೆ ಒವೆಲ್ ಮೈದಾನದಲ್ಲಿ ಖಂಡನಾ ಸಭೆ ನಡೆಸಲು ತೀರ್ಮಾನಿಸಿದ್ದು, ಸುಮಾರು 10ಸಾವಿರ ಜನರು ಸೇರುವ ನಿರೀಕ್ಷೆ ಹೊಂದಿದೆ.

ಖಂಡನಾ ಸಭೆ ಬಳಿಕ ರ್ಯಾಲಿ ಮೂಲಕ ರಂಗಾಯಣಕ್ಕೆ ಮುತ್ತಿಗೆ  ಹಾಕಲು  ಸಭೆಯಲ್ಲಿ ಮುಖಂಡರುಗಳ ಒಕ್ಕೊರಲಿನ ನಿರ್ಣಯ ತೆಗೆದುಕೊಂಡಿದ್ದಾರೆ. ಇತ್ತೀಚೆ ರಂಗಾಯಣದಲ್ಲಿ ನಡೆದ ನಾಟಕದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಗ್ಗೆ ಅವಹೇಳನಕಾರಿ ಸಂಭಾಷಣೆ ಬಳಸಲಾಗಿತ್ತು. ಇದಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.

Key words Siddaramaiah-DK Shivakumar- committee- big-protest-Rangayana