ನಿಮ್ಮ ದುಡ್ಡು ಬೇಡ, ನಮಗೆ ಶಾಂತಿ ಬೇಕು: ಸಿದ್ಧರಾಮಯ್ಯ ನೀಡಿದ‍್ಧ 2 ಲಕ್ಷರೂ. ಪರಿಹಾರ ಹಣ ವಾಪಸ್ ಕಾರಿಗೆ ಎಸೆದ ಮಹಿಳೆ.

Promotion

ಬಾಗಲಕೋಟೆ,ಜುಲೈ,15,2022(www.justkannada.in):  ನಿಮ್ಮ ದುಡ್ಡು ನಮಗೆ ಬೇಡ, ನಮಗೆ ಬದುಕಲು ಶಾಂತಿ ಬೇಕು ಎಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ನೀಡಿದ್ಧ ಪರಿಹಾರ ಹಣವನ್ನ ಮಹಿಳೆಯೊಬ್ಬರು ವಾಪಸ್ ಕಾರಿಗೆ ಎಸೆದ ಘಟನೆ ನಡೆದಿದೆ.

ಬಾದಾಮಿಯ ಕೆರೂರು ಗ್ರಾಮದಲ್ಲಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ‍್ಧರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿ ಗಲಭೆಯಲ್ಲಿ ಗಾಯಗೊಂಡಿದ್ಧ ಮೊಹಮ್ಮದ್ ಹನೀಫ್, ದಾವಲ್ ಮಲಿಕ್ ,ರಫೀಕ್ ಆರೋಗ್ಯ ವಿಚಾರಿಸಿದ್ಧರು.  ನಂತರ ಕುಟುಂಬಸ್ಥರಿಗೆ 2 ಲಕ್ಷ ರೂ. ಪರಿಹಾರವನ್ನ ನೀಡಿದ್ದರು.

ಆದರೆ ಪರಿಹಾರದ ಹಣವನ್ನ ಪಡೆದುಕೊಳ್ಳಲು ಕುಟುಂಬಸ್ಥರು ನಿರಾಕರಿಸಿದ್ದು, ಈ ವೇಳೆ ಸಿದ್ಧರಾಮಯ್ಯ ನೀಡಿದ್ದ 2ಲಕ್ಷ ರೂ. ಪರಿಹಾರ ಹಣವನ್ನ ಸಿದ್ಧರಾಮಯ್ಯಗೆ ವಾಪಸ್ ನೀಡಲು ಮಹಿಳೆ ರಜ್ಮಾ ಯತ್ನಿಸಿದ್ದಾರೆ. ಆದರೆ ಪೊಲೀಸರು ಅವಕಾಶ ನೀಡದ ಹಿನ್ನೆಲೆ ಮಹಿಳೆ ರಜ್ಮಾ ಹಣವನ್ನ ಸಿದ‍್ಧರಾಮಯ್ಯ ಕಾರಿಗೆ ಎಸೆದು ನಿಮ್ಮ ಹಣ ಬೇಡ. ನಮಗೆ ಶಾಂತಿ, ನ್ಯಾಯ ಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Key words: Siddaramaiah -2 lakh- compensation -woman- threw back