ರಾಜ್ಯದಲ್ಲಿ 2ಸಾವಿರ ಮೆ.ವ್ಯಾ ವಿದ್ಯುತ್ ಕೊರತೆ ಇದೆ- ಸಿಎಂ ಸಿದ್ಧರಾಮಯ್ಯ.

Promotion

ಮೈಸೂರು, ಅಕ್ಟೋಬರ್,16,2023(www.justkannada.in): ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಆಗಿರುವುದು ನಿಜ. 2ಸಾವಿರ ಮೆಗಾ ವ್ಯಾಟ್ ವಿದ್ಯುತ್ ಕೊರತೆ ಇದೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ಧರಾಮಯ್ಯ,  ರಾಜ್ಯದಲ್ಲಿ ವಿದ್ಯುತ್ ಸಮಸ್ಯೆ ಇದೆ. 2000 ಮೆಗಾ ವ್ಯಾಟ್ ಕೊರತೆಯಾಗಿದೆ ವಿದ್ಯುತ್ ಸಮಸ್ಯೆ ಪರಿಹಾರಕ್ಕೆ ಕ್ರಮಕೈಗೊಳ್ಳುತ್ತೇವೆ. ವಿದ್ಯುತ್ ಬೇಡಿಕೆ  10 ಸಾವಿರ ಮೆಗಾ ವ್ಯಾಟ್ ಇದ್ದಿದ್ದು ಈಗ 16 ಸಾವಿರ ಮೆಗಾವ್ಯಾಟ್ ಗೆ ತಲುಪಿದೆ ಎಂದರು.  

2ಸಾವಿರ ಮೆಗಾ ವ್ಯಾಟ್ ವಿದ್ಯತ್ ಖರೀದಿಗೆ ಸೂಚಿಸಿದ್ದೇನೆ. 5 ಗಂಟೆ ತ್ರಿಪೇಸ್ ವಿದ್ಯುತ್ ಪೂರೈಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದರು.

Key words: shortage -2 thousand- MW- electricity – state- CM Siddaramaiah.