ಶೂಟಿಂಗ್ ವಿಶ್ವಕಪ್: ಮತ್ತೊಂದು ಚಿನ್ನ, ಬೆಳ್ಳಿ ಗೆದ್ದ ಭಾರತ !

Promotion

ಬೆಂಗಳೂರು, ಜುಲೈ 15, 2022 (www.justkannada.in): ದಕ್ಷಿಣ ಕೊರಿಯಾದ ಚಾಂಗ್ವಾನ್‌ನಲ್ಲಿ ನಡೆದ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತ ಮತ್ತೊಂದು ಚಿನ್ನ ಮತ್ತು ಬೆಳ್ಳಿ ಗೆದ್ದಿದೆ.

ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ಭಾರತ ಚಿನ್ನದ ಪದಕ ಗೆದ್ದುಕೊಂಡಿತು.

ಅರ್ಜುನ್ ಬಾಬುತಾ, ತುಷಾರ್ ಮಾನೆ ಮತ್ತು ಪಾರ್ಥ್ ಮಖಿಜಾ ಅವರನ್ನೊಳಗೊಂಡ ಭಾರತ ತಂಡವು ಆತಿಥೇಯ ಕೊರಿಯಾ ತಂಡದ ವಿರುದ್ಧ 17-15 ರಿಂದ ಫೈನಲ್‌ನಲ್ಲಿ ಜಯಗಳಿಸಿತು.

ಅದೇ ರೀತಿ ಮಹಿಳೆಯರ ಏರ್ ರೈಫಲ್ ಟೀಮ್ ಇವೆಂಟ್ ನಲ್ಲಿ ಭಾರತ ಬೆಳ್ಳಿ ಗೆದ್ದುಕೊಂಡಿತು. ಇಲೆವೆನಿಲ್ ವಲರಿವನ್, ಮೆಹುಲಿ ಘೋಷ್ ಮತ್ತು ರಮಿತಾ ಅವರನ್ನೊಳಗೊಂಡ ಭಾರತ ತಂಡ ಫೈನಲ್‌ನಲ್ಲಿ ಕೊರಿಯಾ ವಿರುದ್ಧ 10-16 ಅಂತರದಲ್ಲಿ ಸೋತು ಬೆಳ್ಳಿಗೆ ತೃಪ್ತಿಪಟ್ಟಿದೆ.