ಕುರುಬ ಸಮುದಾಯ ಎಸ್ ಟಿಗೆ ಸೇರಿಸುವ ವಿಚಾರ: ಸಿದ್ಧರಾಮಯ್ಯಗೆ ಎಚ್ಚರಿಕೆ ನೀಡಿದ ಎಂಎಲ್ ಸಿ ಹೆಚ್.ವಿಶ್ವನಾಥ್

Promotion

ಮೈಸೂರು,ಜನವರಿ,20,2021(www.justkannada.in):  ಕುರುಬ ಸುಮದಾಯವನ್ನ ಎಸ್ ಟಿಗೆ ಸೇರಿಸುವಂತೆ ಆಗ್ರಹಿಸಿ ಸ್ವಾಮೀಜಿ ನಡೆಸುವ  ಪಾದಯಾತ್ರೆಗೆ ಆರ್ ಎಸ್ ಎಸ್  ಫಂಡ್ ನೀಡುತ್ತಿದೆ  ಎಂದು ಆರೋಪ ಮಾಡಿದ  ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.jk

ಮೈಸೂರಿನಲ್ಲಿ ಸುದ್ಧಿಗೋಷ್ಠಿ ನಡೆಸಿ ಈ ಬಗ್ಗೆ ಮಾತನಾಡಿದ ಹೆಚ್.ವಿಶ್ವನಾಥ್, ಇಡೀ ಸಮುದಾಯಕ್ಕೆ ನೀವು ಅವಮಾನ ಮಾಡುತ್ತಿದ್ದೀರಾ. ಸಮಾಜ ನಿಮ್ಮನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಸಿದ್ದರಾಮಯ್ಯ ಆರೋಪದಿಂದ ನನಗೆ ನೋವಾಗಿದೆ. ಅವರು ನಮ್ಮ ಸಮುದಾಯದ ಸ್ವಾಮೀಜಿ,  ಅವರನ್ನ ಭಕ್ತಿ ಭಾವದಿಂದ ನೋಡುತ್ತಿದ್ದೇವೆ. ಆದರೆ ಮಠದ ಮೇಲೆ ಇಂತಹ ದೊಡ್ಡ ಆಪಾದನೆ ಸರಿಯಲ್ಲ. ಸಿದ್ದರಾಮಯ್ಯ ಮರೆತಿದ್ದಾರೆ ಮಠದಿಂದ ಧಾರ್ಮಿಕ ಸಂಘಟನೆಯಿಂದಲೇ ಅವರು ಸಿಎಂ ಆಗಿದ್ದು. ನಿಮಗೆ ಮಠನೂ ಗೊತ್ತಿಲ್ಲ, ಸ್ವಾಮೀಜಿನೂ ಗೊತ್ತಿಲ್ಲ. ಮಠದ ಬಗ್ಗೆ ನಿಮಗೆ ಗೌರವ ಇಲ್ಲ. ಸಿದ್ದರಾಮಯ್ಯ ನಮ್ಮ ಸ್ವಾಮಿಗಳ‌ ಮಾನ ಹರಾಜು ಹಾಕುತ್ತಿದ್ದಾರೆ. ಇದು ನಿಮಗೆ ಗೌರವ ತರುತ್ತಾ ? ನಮ್ಮ ಬಗ್ಗೆ ನೀವು ಹೇಳಿ ಆದರೆ ಸ್ವಾಮೀಜಿ ಬಗ್ಗೆ ಮಾತನಾಡಬೇಡಿ. ನೀವು ತುಂಬಾ ಚಿಕ್ಕವರಾಗಿದ್ದೀರಾ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

ಬಿಳಿ ಬಟ್ಟೆ ಹಾಕಿರುವ ಸಿದ್ದರಾಮಯ್ಯ ಜನರ ಕಷ್ಟ ಸುಖಗಳು ಅರ್ಥ ಆಗ್ತಿಲ್ವಾ. ಇಡೀ ಸಮುದಾಯವನ್ನು ಅವಮಾನ ಮಾಡ್ತಾ ಇದೀರಾ. ಮಠ ಕಟ್ಟಲು ಬಿಕ್ಷೆ ಎತ್ತಿದ್ದೇವೆ. ನಿಮ್ಮಿಂದ ಈ ಮಠಕ್ಕೆ 10 ಪೈಸೆ ಕೊಡುಗೆ ಇದ್ಯಾ..? ಎಂದು ಪ್ರಶ್ನಿಸಿದ ಹೆಚ್.ವಿಶ್ವನಾಥ್, ಬಹಳ ಲಘವಾಗಿ ಮಠವನ್ನ ಸಮಾಜವನ್ನು, ಸ್ಮಾಮಿಗಳನ್ನ ಮಾತನಾಡುವುದು ಶೋಭೆ ತರುವಂತದಲ್ಲ. ಜನರನ್ನ ದಿಕ್ಕುತಪ್ಪಿಸಬೇಡಿ. ಸಮುದಾಯದ ಋಣ ನಿಮ್ಮ ಮೇಲಿದೆ. ಸಮಾಜದಿಂದ ನೀವು ಇಷ್ಟೆಲ್ಲ ಆಗಿದ್ದು. ಈ ಇಬ್ಬಂದಿತ ನಿಲ್ಲಿಸಿ. ಏಕಮಾದ್ವಿತೀಯ  ಅಂತ ತಿಳಿದುಕೊಂಡಿದ್ದೀರಿ. ಈ ನಿಮ್ಮ ಹೇಳಿಕೆಯನ್ನು ವಾಪಸ್ ಪಡೆಯಿರಿ. ಈ ಹೇಳಿಕೆ ವಾಪಸ್ ಪಡೆಯಬೇಕು ಇಲ್ಲ ಅಂದ್ರೆ ಸಮಾಜದಿಂದ ಬಹಿಷ್ಕಾರ ಹಾಕಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

ಸಿದ್ದರಾಮಯ್ಯ ನೀನೊಬ್ಬನೇ ಬುದ್ದಿವಂತ ಅಲ್ಲ…

ಕುಲಶಾಸ್ತ್ರ ಅಧ್ಯಯನ ಮಾಡಬೇಕು ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರ ಕುರಿತು ಕಿಡಿಕಾರಿದ ಹೆಚ್.ವಿಶ್ವನಾಥ್, ಸಿದ್ದರಾಮಯ್ಯ ನೀನೊಬ್ಬನೇ ಬುದ್ದಿವಂತ ಅಲ್ಲ. ನಮಗೂ ಅದು ಗೊತ್ತಿದೆ, ನೀನು ಹೋರಾಟಕ್ಕೆ ಬರುವುದಾದರೆ ಬಾ ಇಲ್ಲ ಬಿಡು ಈ ರೀತಿ ದಾರಿ ತಪ್ಪಿಸುವ ಕೆಲಸ ಮಾಡಬೇಡ ಎಂದು ಸಿದ್ಧರಾಮಯ್ಯ ವಿರುದ್ದ ಗುಡುಗಿದರು.shepherd community –ST- Reservation- MLC -H. Vishwanath-warned -Siddaramaiah

ಎಲ್ಲಾ ಪಕ್ಷದ ಶಾಸಕಾಂಗ ಸಭೆಯ ನಾಯಕರ ನಡವಳಿಕೆ ಸರಿ ಇಲ್ಲ. ಸಿದ್ದರಾಮಯ್ಯ ಕುಮಾರಸ್ವಾಮಿ ಎಲ್ಲರೂ ಅದೇ ರೀತಿ ಇದ್ದಾರೆ. ಇದರಿಂದಲೇ ಪಕ್ಷಗಳು ಹಾಳಾಗುತ್ತಿವೆ. ನಾನು, ನಾನು ನಾನು  ಅನ್ನೋದು ಎಲ್ಲರಿಗೂ ಬಂದಿದೆ ಎಂದು  ಪ್ರಸಕ್ತ ರಾಜಕಾರಣದ ಬಗ್ಗೆ ಹೆಚ್. ವಿಶ್ವನಾಥ್ ಬೇಸರ ವ್ಯಕ್ತಪಡಿಸಿದರು.

ENGLISH SUMMARY…

Demand to include Kuruba community in ST: H. Vishwanath warns Siddaramaiah
Mysuru, Jan. 20, 2021 (www.justkannada.in): BJP MLC H. Vishwanath has warned former Chief Minister and Opposition party leader Siddaramaiah over his allegations of RSS funding the padayatra of Swamiji demanding the government to include Kuruba community under ST.
Addressing a press meet held in Mysuru today H. Vishwanath said, “you are insulting the entire community. The community will excommunicate you.”Demand to include Kuruba community in ST: H. Vishwanath warns Siddaramaiah Mysuru, Jan. 20, 2021 (www.justkannada.in): BJP MLC H. Vishwanath has warned former Chief Minister and Opposition party leader Siddaramaiah over his allegations of RSS funding the padayatra of Swamiji demanding the government to include Kuruba community under ST. Addressing a press meet held in Mysuru today H. Vishwanath said, "you are insulting the entire community. The community will excommunicate you." Expressing his ire on Siddaramaiah's allegations, H. Vishwanath questioned whether he is understanding the problems of the people are not. "Have you contributed anything for the math? It is not good to speak lightly against religious maths and community. Don't try to mislead the people. You owe to the community. It is because of the community you are in this position today. Take your words back, otherwise, you will have to be ostracised from the community," he warned. Keywords: H. Vishwanath/ Siddaramaiah/ excommunicate/ ostracise
Expressing his ire on Siddaramaiah’s allegations, H. Vishwanath questioned whether he is understanding the problems of the people are not. “Have you contributed anything for the math? It is not good to speak lightly against religious maths and community. Don’t try to mislead the people. You owe to the community. It is because of the community you are in this position today. Take your words back, otherwise, you will have to be ostracised from the community,” he warned.
Keywords: H. Vishwanath/ Siddaramaiah/ excommunicate/ ostracise

Key words:   shepherd community –ST- Reservation- MLC -H. Vishwanath-warned -Siddaramaiah