ವಿಧಾನಸಭಾ ಕಲಾಪ ಆರಂಭ: ಅಗಲಿದ ಗಣ್ಯರಿಗೆ ಸಂತಾಪ.

Promotion

ಬೆಳಗಾವಿ,ಡಿಸೆಂಬರ್,19,2022(www.justkannada.in): ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ  ಆರಂಭವಾಗಿದ್ದು ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು.

ವಿಧಾನಸಭೆ ಕಲಾಪ ಆರಂಭವಾಗಿದ್ದು ಇತ್ತೀಚೆಗೆ ನಿಧನರಾದ ಆನಂದ ಮಾಮನಿ,  ಮುಲಾಯಂ ಸಿಂಗ್ ಯಾದವ್,  ಜಬ್ಬಾರ್ ಖಾನ್ ಹೊನ್ನಳ್ಳಿ ಸೇರಿ ಅಗಲಿದ ಗಣ್ಯರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ  ಸಂತಾಪ ಸೂಚಿಸಿದರು.

ಇದಕ್ಕೂ ಮುನ್ನ ಸುವರ್ಣಸೌಧದಲ್ಲಿ ಹಲವು ಮಹಾನೀಯರ ಭಾವಚಿತ್ರ ಅನಾವರಣ ಮಾಡಲಾಯಿತು. ಬಸವೇಶ್ವರ, ಮಹಾತ್ಮ ಗಾಂಧಿ, ಸಾವರ್ಕರ್   ಸರ್ಧಾರ್ ವಲ್ಲಭಾಯ್ ಪಟೇಲ್ ಅವರ ಭಾವಚಿತ್ರವನ್ನ  ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ, ಕಾನೂನು ಸಚಿವ ಮಾಧುಸ್ವಾಮಿ, ಸಿಎಂ  ಬಸವರಾಜ ಬೊಮ್ಮಾಯಿ ಅನಾವರಣ ಮಾಡಿದರು.

Key words: session- belagavi- Condolences –death- elites.