Thursday, September 24, 2026

BDA Apartments

Home Front Page ವೀರ ಸಾವರ್ಕರ್ ಫೋಟೊ ಅಳವಡಿಕೆ: ಸುವರ್ಣಸೌಧದ ಮೆಟ್ಟಿಲಿನ ಮೇಲೆ  ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ.

ವೀರ ಸಾವರ್ಕರ್ ಫೋಟೊ ಅಳವಡಿಕೆ: ಸುವರ್ಣಸೌಧದ ಮೆಟ್ಟಿಲಿನ ಮೇಲೆ  ಕಾಂಗ್ರೆಸ್ ನಾಯಕರಿಂದ ಪ್ರತಿಭಟನೆ.

ಬೆಳಗಾವಿ,ಡಿಸೆಂಬರ್,19,2022(www.justkannada.in): ಇಂದಿನಿಂದ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲ ಅಧಿವೇಶನ  ಆರಂಭವಾಗಲಿದ್ದು ಈ ಮುನ್ನವೇ ರಾಜ್ಯ ಬಿಜೆಪಿ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಿದೆ.

ಇಂದಿನಿಂದ ಸುವರ್ಣಸೌಧದಲ್ಲಿ 10 ದಿನಗಳ ಕಾಲ ನಡೆಯಲಿರುವ ಅಧಿವೇಶನದಲ್ಲಿ ಬಿಜೆಪಿ ಸರ್ಕಾರದ ಮುಗಿಬೀಳಲು ಪ್ರತಿಪಕ್ಷಗಳು ಸಜ್ಜಾಗಿವೆ. ಈ ಮಧ್ಯೆ ಸುವರ್ಣಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಫೋಟೊ ಹಾಕಿದ್ದಕ್ಕೆ ವಿಪಕ್ಷ ನಾಯಕ ಸಿದ್ಧರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸುವರ್ಣ ಸೌಧದ ಮೆಟ್ಟಿಲ ಬಳಿ ಪ್ರತಿಭಟನೆ ನಡೆಸಿದರು.ವೀರ ಸಾವರ್ಕರ್ ಫೋಟೊ ಅಳವಡಿಕೆ: ಸುವರ್ಣಸೌಧದ ಮೆಟ್ಟಿಲಿನ ಮೇಲೆ ಕಾಂಗ್ರೆಸ್ ನಾ...

ಸುವರ್ಣ ಸೌಧದ ಮುಖ್ಯದ್ವಾರದ ಬಳಿ ಜಗಜ್ಯೋತಿ ಬಸವಣ್ಣ, ರಾಷ್ಟ್ರಕವಿ ಕುವೇಂಪು, ವಾಲ್ಮಿಕಿ ಅವರಂತಹ ಮಹಾನೀಯರ ಫೋಟೋ  ಹಿಡಿದು ಕಾಂಗ್ರೆಸ್ ನಾಯಕರು ಧರಣಿ ನಡೆಸಿದರು. ಈ ವೇಳೆ ಮಾಜಿ ಸಚಿವರಾದ ಹೆಚ್.ಕೆ ಪಾಟೀಲ್ ಯು.ಟಿಖಾದರ್ ಸೇರಿ ಹಲವರು ನಾಯಕರು ಉಪಸ್ಥಿತರಿದ್ದರು.

Key words: Savarkar -photo -Protest – Congress leaders – Suvarnasoudha.