ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬದಲಾವಣೆಗೆ ಅಸಮಾಧಾನಿತ ಹಿರಿಯ ನಾಯಕರಿಂದ ಆಗ್ರಹ…?

Promotion

ಬೆಂಗಳೂರು,ಜೂ,6,2019(www.justkannada.in): ತಮಗೆ ಸಚಿವ ಸ್ಥಾನ ನೀಡದ ಹಿನ್ನೆಲೆ ಹಾಗೂ ಪಕ್ಷದಲ್ಲಿ ಕಡೆಗಣಿಸಿರುವುದಕ್ಕೆ  ಬೇಸರಗೊಂಡಿರುವ ಕಾಂಗ್ರೆಸ್ ಹಿರಿಯ ನಾಯಕರು ತಮ್ಮ ಅಸಮಾಧಾನವನ್ನ ಹೊರಹಾಕುತ್ತಿದ್ದಾರೆ.

ಈ ನಡುವೆ ಅಸಮಾಧಾನಿತ ಹಿರಿಯ ನಾಯಕರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರನ್ನ ಬದಲಿಸುವಂತೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.  ಪಕ್ಷದ ಆಂತರಿಕ ಸಮಸ್ಯೆ ಬಗೆಹರಿಸುವಲ್ಲಿ ಕೆ.ಸಿ ವೇಣುಗೋಪಾಲ್ ವಿಫಲರಾಗಿದ್ದಾರೆ. ಹಾಗೆಯೇ ಕೆ.ಸಿ ವೇಣುಗೋಪಾಲ್ ಗೆ ಗ್ರೌಂಡ್ ರಿಯಾಲಿಟಿ  ಗೊತ್ತಿಲ್ಲ ಪ್ರತಿ ಹಂತದಲ್ಲೂ ಒರಟುತನ ತೋರುತ್ತಾರೆ. ಜತೆಗೆ ಪಕ್ಷ ಸಂಘಟನೆ ಪರಿಣಾಮಕಾರಿಯಾಗಿ ಮಾಡುತ್ತಿಲ್ಲ. ಹೀಗಾಗಿ ಅವರನ್ನ ಬದಲಾಯಿಸುವಂತೆ ಆಗ್ರಹಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ ಕಾಂಗ್ರೆಸ್ ನಾಯಕರ ನಡೆಯ ವಿರುದ್ದ ಬೇಸರಗೊಂಡು ಕಾಂಗ್ರೆಸ್ ಮುಖಂಡರಾದ ರೋಷನ್ ಬೇಗ್ ಮತ್ತು ರಾಮಲಿಂಗರೆಡ್ಡಿ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು. ಹಿರಿಯ ಮುಖಂಡ ರೋಷನ್ ಬೇಗ್ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ವಿರುದ್ದ ಆಕ್ರೋಶ ಹೊರ ಹಾಕಿದ್ದರು.

Key words: Senior Congress leaders have been demanding the change of state Congress In charge  KC Venugopal.

#KCVenugopal #congress #Seniorleaders  #demanding  #change