ಬೆಂಗಳೂರ ರಾಜಮಾರ್ಗದಲ್ಲಿ ‘ರಾಜಕುಮಾರ’ನ ಅಂತಿಮ ಯಾತ್ರೆ: ಅಂತಿಮ ಸಿದ್ಧತೆ ಮಾಡಿದ ಪೊಲೀಸರು

Promotion

ಬೆಂಗಳೂರು, ಅಕ್ಟೋಬರ್ 30, 2021 (www.justkannada.in): ಕಂಠೀರವ ಸ್ಟೇಡಿಯಂನಲ್ಲಿ ಅಪ್ಪು ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಇಂದೇ ಕಂಠೀರವ ಸ್ಟುಡಿಯೋದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು,. ಇದಕ್ಕಾಗಿ ಸಲಕ ಸಿದ್ಧತೆ ನಡೆದಿದೆ.
ಪುನೀಥ್ ಪಾರ್ಥೀವ ಶರೀರವನ್ನು ಕಂಢೀರವ ಸ್ಟುಡಿಯೋಕ್ಕೆ ತೆಗೆದುಕೊಂಡು ಬರಲು ಮಾರ್ಗ ನಿರ್ಧಾರವಾಗಿದೆ.

ಕಂಠೀರವ ಸ್ಟೇಡಿಯಂನಿಂದ ಕಾರ್ಪೋರೇಷನ್,ಮೈಸೂರ್ ಬ್ಯಾಂಕ್ ಸರ್ಕಲ್,ಚಾಲುಕ್ಯ ಸರ್ಕಲ್,ಕಾವೇರಿ ಜಂಕ್ಷನ್,ಸ್ಯಾಂಕಿ,ಗೋವರ್ಧನ,ಗೊರಗುಂಟೆ ಪಾಳ್ಯದ ಮೂಲಕ ಕಂಠೀರವ ಸ್ಟುಡಿಯೋಕ್ಕೆ ಅಂತಿಮ ಯಾತ್ರೆ ಸಾಗಲಿದೆ.

ಇನ್ನು ಪುನೀತ್ ಅವರ ಪುತ್ರಿ ಧೃತಿ ಸಂಜೆ ನಾಲ್ಕು ಗಂಟೆ ಸುಮಾರಿಗೆ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.