ಸಾಲು ಸಾಲು ಚಿತ್ರಗಳಲ್ಲಿ ಅಪ್ಪು ನೋಡುವ ಭಾಗ್ಯ ಮಿಸ್ಸಾಯ್ತು, ಇದೋ ಇಲ್ಲಿದೆ ಪುನೀತ್ ನಟಿಸಬೇಕಿದ್ದ ಚಿತ್ರಗಳ ಲಿಸ್ಟ್…

ಬೆಂಗಳೂರು, ಅಕ್ಟೋಬರ್ 30, 2021 (www.justkannada.in): ಸಾಲು ಸಾಲು ಚಿತ್ರಗಳಲ್ಲಿ ಅಪ್ಪು ನೋಡುವ ಭಾಗ್ಯ ಅಭಿಮಾನಿಗಳಿಗೆ ಮಿಸ್ಸಾಗಿದೆ. ಪುನೀತ್ ನಟಿಸಬೇಕಿದ್ದ ಚಿತ್ರಗಳ ಲಿಸ್ಟ್ ಇಲ್ಲಿದೆ…

ಪುನೀತ್ ರಾಜಕುಮಾರನ ಸಾಲು ಸಾಲು ಸಿನಿಮಾಗಳ ಕಥೆಗಳನ್ನು ಕೇಳಿದ್ದರು. ಜೊತೆಗೆ ಬ್ಯಾಕ್‌ ಟು ಬ್ಯಾಕ್‌ ಸಿನಿಮಾಗಳಿಗೆ ಅಪ್ಪು ಸಹಿ ಮಾಡಿದ್ದರು.

ಸದ್ಯ ಜೇಮ್ಸ್‌ ಚಿತ್ರದ ಶೂಟಿಂಗ್‌ನಲ್ಲಿ ಅಪ್ಪು ತೊಡಗಿದ್ದರು. ಈಗಾಗಲೇ ಚಿತ್ರದ 75ರಷ್ಟು ಭಾಗ ಚಿತ್ರೀಕರಣ ಮುಗಿದಿದೆ. ಪವನ್‌ ಕುಮಾರ್ ದ್ವಿತ್ವ ಚಿತ್ರಕ್ಕೂ ಅಪ್ಪು ಗ್ರೀನ್ ಸಿಗ್ನಲ್ ಕೊಟ್ಟಿದ್ದರು.

ದ್ವಿತ್ವ ಬಳಿಕ ದಿನಕರ್ ತೂಗುದೀಪ್ ನಿರ್ದೇಶನದಲ್ಲಿ ಪುನೀತ್ ರಾಜಕುಮಾರ್ ಸಿನಿಮಾ ಮಾಡಬೇಕಿತ್ತು. ಇದಾದ ನಂತರ ಸಂತೋಷ್ ಆನಂದ್ ರಾಮ್‌ ಅವರಿಗೂ ಅಪ್ಪು ಡೇಟ್ ಕೊಟ್ಟಿದ್ದರು.

ಇದರ ಜೊತೆಗೆ ನಿರ್ದೇಶಕ ಯೋಗರಾಜ್‌ ಭಟ್ ಬಳಿ ಕೂಡ ಪುನೀತ್ ರಾಜಕುಮಾರ್ ಅವರ ಡೇಟ್. ಯೋಗರಾಜ್ ಭಟ್ ಕೂಡ ಪುನೀತ್‌ ರಾಜ್‌ಕುಮಾರ್‌ ಅವರಿಗೆ ತಕ್ಕಂತಹ ಕಥೆಯನ್ನ ಸಿದ್ದ ಮಾಡಿಕೊಳ್ಳುವಲ್ಲಿ ಬಿಸಿಯಾಗಿದ್ದರು.