ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ.

ಮೈಸೂರು,ಅಕ್ಟೋಬರ್,30,2021(www.justkannada.in):  ಖ್ಯಾತ ನಟ ಪುನೀತ್ ರಾಜ್ ಕುಮಾರ್ ಸ್ಮರಣಾರ್ಥ ಸಂಕಷ್ಟ ಪರಿಸ್ಥಿತಿಯಲ್ಲಿರುವ ಕುಟುಂಬಗಳಿಗೆ ಪ್ರೈಸ್ ವಾಟರ್ ಹೌಸ್ ಕೂಪರ್ಸ್ ನೆರವಿನಿಂದ ಕ್ರೆಡಿಟ್ – ಐ ಸಂಸ್ಥೆ, ಇನ್ನರ್ ವೀಲ್ ಕ್ಲಬ್ ಆಫ್ ಮೈಸೂರು ಮಿಡ್ ಟೌನ್ ಹಾಗೂ ಮಹಾರಾಣಿ ಮಹಿಳಾ ಕಲಾ ಕಾಲೇಜು ಇವರ ಸಹಯೋಗ ದಲ್ಲಿ  ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುತ್ತಿದೆ.

ಮೌಲ್ಯಾಧಾರಿತ ಜೀವನದ ಪ್ರತಿನಿಧಿ, ಮಾನವೀಯ ಪರಂಪರೆಯ ನಟ, ಯುವ ಜನರ ಮಾದರಿ, ಸಾಮಾಜಿಕ ಕಳಕಳಿಯ ನಾಯಕ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್  ಅವರ ಸ್ಮರಣಾರ್ಥ ಇಂದು ಬೆಳಿಗ್ಗೆ 11 ಗಂಟೆಗೆ ಆಹಾರ ಪದಾರ್ಥಗಳ ಕಿಟ್ ವಿತರಣೆ ಕಾರ್ಯಕ್ರಮ ನಡೆಯಲಿದೆ.

ಕ್ರೆಡಿಟ್ – ಐ ಸಂಸ್ಥೆಯ ಕಛೇರಿ, ನಂ.195, “ಅವ್ವ”, 3 ನೇ ಕ್ರಾಸ್, 4 ನೇ ಮುಖ್ಯ ರಸ್ತೆ, ಗೌರಿಶಂಕರ ನಗರ, ಮೈಸೂರು.  ಇಲ್ಲಿ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಗುತ್ತಿದೆ.

ಕರೋನ ಲಾಕ್ ಡೌನ್ ತೆರವಿನ ನಂತರವೂ ಸಾಮಾನ್ಯ ಜೀವನಕ್ಕೆ ಹಿಂದಿರುಗಲು ಸಾಧ್ಯವಾಗದ ಮನೆಗೆಲಸ ಮಾಡುವ ಮಹಿಳೆಯರು, ವಿಕಲಚೇತನರು, ವಿಧವೆಯರು ಹಾಗೂ ಸಂಕಷ್ಟ ಪರಿಸ್ಥಿತಿಯಲ್ಲಿರುವ ಸುಮಾರು 60 ಕ್ಕೂ ಹೆಚ್ಚಿನ ಕುಟುಂಬಗಳಿಗೆ ಸುಮಾರು 1 ಲಕ್ಷ ರೂ ಮೊತ್ತದ ಆಹಾರ ಪದಾರ್ಥಗಳ ಕಿಟ್ ವಿತರಿಸಲಾಗುತ್ತಿದೆ ಎಂದು ಡಾ. ಎಂ.ಪಿ. ವರ್ಷ ತಿಳಿಸಿದ್ದಾರೆ.

Key words: Distribution – food kits – memory –actor- Puneet Raj Kumar