ರಿಲೀಸ್ ಫಸ್ಟ್ ಡೇ: ಭರ್ಜರಿ ದಾಖಲೆ ಬರೆಯಲು ‘ರಾಬರ್ಟ್’ ರೆಡಿ

Promotion

ಬೆಂಗಳೂರು, ಮಾರ್ಚ್ 09, 2021 (www.justkannada.in): ಮೊದಲ ದಿನವೇ ರಾಬರ್ಟ್​ ಸಿನಿಮಾ ಕರ್ನಾಟಕ ಒಂದರಲ್ಲೇ ಭಾರೀ ದೊಡ್ಡ ಮಟ್ಟದಲ್ಲಿ ಪ್ರದರ್ಶನ ಕಾಣುತ್ತಿದೆ.

ಮೊದಲ ದಿನ ರಾಬರ್ಟ್​ 700ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗುತ್ತಿದೆ. ಈಗಾಗಲೇ 656 ಚಿತ್ರಮಂದಿರಗಳು ರಿಲೀಸ್​ ಆಗೋದು ಖಚಿತವಾಗಿದ್ದು, ಇನ್ನೊಂದು 50 ಚಿತ್ರಮಂದಿರಗಳು ಹೆಚ್ಚುವರಿಯಾಗಿ ಸೇರ್ಪಡೆ ಆಗುವ ನಿರೀಕ್ಷೆ ಇದೆ.

ಈ ಹಿಂದೆ ತರುಣ್​ ಸುಧೀರ್​ ನಿರ್ದೇಶನ ಮಾಡಿದ್ದ ‘ಚೌಕ’ ಸಿನಿಮಾದಲ್ಲಿ ದರ್ಶನ್​ ಅವರು ರಾಬರ್ಟ್​ ಎಂಬ ಅತಿಥಿ ಪಾತ್ರವನ್ನು ಮಾಡಿದ್ದರು. ಇದೀಗ ದರ್ಶನ್​ ನಟನೆಯ ರಾಬರ್ಟ್​ ಸಿನಿಮಾ ಕೂಡ ಹೊಸ ದಾಖಲೆ ಬರೆಯೋಕೆ ಸಿದ್ಧವಾಗಿದೆ. ಮೊದಲ ದಿನ ಕನಿಷ್ಠ 2000 ಪ್ರದರ್ಶನ ಆಗುವ ನಿರೀಕ್ಷೆ ಇದೆ.