ಚುನಾವಣೆ ಮುಂದೂಡಿರುವುದಕ್ಕೆ ಕಾರಣ ಹೇಳಿ: ನಮ್ಮ ಸಂಶಯ ಬಗೆಹರಿಸಿ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹ..

ಬೆಂಗಳೂರು,ಸೆ,27,2019(www.justkannada.in): ಯಾವುದೇ ಸಕಾರಣಗಳಿಲ್ಲದೇ ಚುನಾವಣೆ ಮುಂದೂಡಿರುವುದು ಸರಿಯಲ್ಲ. ಚುನಾವಣೆ ಮುಂದೂಡುವುದಕ್ಕೆ ಕಾರಣ ಹೇಳಿ. ನಮ್ಮ ಸಂಶಯ ಬಗೆಹರಿಸಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್,  ಸುಪ್ರೀಂ ಕೋರ್ಟ್ ತಡೆ ಕೊಡದೇ ಚುನಾವಣಾ ಮುಂದೂಡಿದ್ದು ಯಾಕೆ..? ನಾಮಪತ್ರ ಸಲ್ಲಿಕೆ ಮಾಡಿದವರ ಪರಿಸ್ಥಿತಿ ಏನು. ಚುನಾವಣಾ ಆಯೋಗ ಒಂದು ಪಕ್ಷದ ಸಂಸ್ಥೆ ಅನ್ನೋ ರೀತಿ ವರ್ತನೆ ಮಾಡ್ತಿರೋದು ಸರಿಯಲ್ಲ. ಆರ್ ಬಿಐ, ಚುನಾವಣಾ ಆಯೋಗ, ಸಿಬಿಐ, ಇಡಿ, ಐಟಿ ಎಲ್ಲವೂ ಸಹ ಕಾಂಪ್ರೋಮೈಸ್ ಆಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇನ್ನು ಬಹಳ ಪ್ರಮುಖ ವಿಚಾರಗಳನ್ನ ನಮ್ಮ ವಕೀಲರು ಕೋರ್ಟ್ ಮುಂದೆ ಪ್ರಸ್ತಾಪ ಮಾಡಿದ್ದಾರೆ. ಎಲ್ಲರಿಗೂ ಗೊತ್ತು ಅನರ್ಹ ಶಾಸಕರು ಅಧಿಕಾರ ಮತ್ತು ಹಣಕ್ಕಾಗಿ ಬಿಜೆಪಿ ಗೆ ಹೋಗಿದ್ದಾರೆ ಅನ್ನೋದು. ಜನತಾ ನ್ಯಾಯಲಯದ ಮುಂದೆ ಇವರು ಅನರ್ಹರೇ. ವಕೀಲರು ಬದಲಾದ ತಕ್ಷಣ ವಾದ ಬದಲಾಗಿದೆ. ಸುಪ್ರೀಂ ಕೋರ್ಟ್ ಆದೇಶ ಬರುವವರೆಗೂ ಇವರು ಅನರ್ಹರೇ. ಇವರು ಬಿಜೆಪಿ ಟ್ರ್ಯಾಪ್ ಗೆ ಒಳಗಾಗಿದ್ದಾರೆ. ಇವರಿಂದ ಬಿಜೆಪಿಗೆ ಅನುಕೂಲವಾಗಿದೆ ಬಿಟ್ರೆ. ಇವರಿಗೆ ಏನು ಲಾಭ ಆಗಿಲ್ಲ. ಡಿಸಿಎಂ ಅವರೇ ಇವರು ದಾರಿದ್ರ್ಯರು ಅಂತ ಹೇಳಿದ್ದಾರೆ ಎಂದು ಲೇವಡಿ ಮಾಡಿದರು.

ನಿನ್ನೆ ಸುಪ್ರೀಂ ಕೋರ್ಟ್ ಚುನಾವಣೆ ಮುಂದೂಡಿಕೆ ಸೂಚನೆ ನೀಡಿದೆ. ಸಂಪೂರ್ಣ ಆದೇಶ ಪ್ರತಿ ನಾವು ನೋಡಲು ಸಾಧ್ಯವಾಗಿಲ್ಲ. ಮೇಲ್ನೋಟಕ್ಕೆ ಅತೃಪ್ತ ಅರ್ಜಿಗೆ ಹಿನ್ನಡೆ ಆಗಿದೆ. ಸ್ಪೀಕರ್ ಆದೇಶ ಬಗ್ಗೆ ಅತೃಪ್ತರು ಲಘುವಾಗಿ ಮಾತನಾಡಿದ್ರು ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಇದೇ ವೇಳೆ ಚುನಾವಣಾ ಆಯೋಗದ ವಿರುದ್ದ ಬೇಸರ ವ್ಯಕ್ತಪಡಿಸಿದ ದಿನೇಶ್ ಗುಂಡೂರಾವ್, ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅಕ್ಷೇಪವಿಲ್ಲ ಅಂತಾ ಹೇಳಿದ್ದಾರೆ. ಯಾರು ಕೇಳದೇ ಇವರು ಯಾಕೆ ಹೇಳಿದ್ರು. ಚುನಾವಣಾ ಮುಂದೂಡುವುದಕ್ಕೆ ನಮಗೆ ಯಾವುದೇ ಆಕ್ಷೇಪ ಇಲ್ಲ ಅಂತ ಹೇಳ್ತಾರೆ. ಯಾರಿಗೋ ಸಹಾಯ ಮಾಡಲು ಚುನಾವಣಾ ಆಯೋಗ ಈ ರೀತಿ ವರ್ತನೆ ಮಾಡಿದೆ. ಅತ್ಯಂತ ಸೂಕ್ಷ್ಮ ಕಾರಣಗಳಿಲ್ಲದೇ ಚುನಾವಣಾ ಮುಂದೂಡಲು ಸಾಧ್ಯವಿಲ್ಲ. ಹೀಗಾಗಿ ಚುನಾವಣಾ ಆಯೋಗದ ಮೇಲೆ ಸಂಶಯ ಬರ್ತಿದೆ ಎಂದು ಕಿಡಿಕಾರಿದರು.

Key words: reason -postponement – election-KPCC president- Dinesh Gundurao -demands