ಟಾಲಿವುಡ್ ಗೆ ರೀ ಎಂಟ್ರಿ ಕೊಟ್ಟ ರಿಯಲ್ ಸ್ಟಾರ್ ಉಪೇಂದ್ರ…

ಬೆಂಗಳೂರು,ಮಾ,21(www.justkannada.in): ಟಾಲಿವುಡ್‍ನ ಬಾಕ್ಸರ್ ಚಿತ್ರದಲ್ಲಿ ಕನ್ನಡದ ರಿಯಲ್ ಸ್ಟಾರ್ ಉಪೇಂದ್ರ ಅವರು ಅಭಿನಯಿಸುತ್ತಿದ್ದಾರೆ.

ಟೀಸರ್ ಮೂಲಕವೇ ಈಗಾಗಲೇ ಚಲನಚಿತ್ರ ರಸಿಕರ ಮನ ಗೆದ್ದಿರುವ  ಬಾಕ್ಸರ್  ಚಿತ್ರದ ಅತಿಥಿ ಪಾತ್ರವೊಂದರಲ್ಲಿ ನಟ ಉಪೇಂದ್ರ ಕಾಣಿಸಿಕೊಳ್ಳುತ್ತಿದ್ದಾರೆ, ಈ ಮೂಲಕ ಅವರು ತೆಲುಗು ಚಿತ್ರಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ.

ಟಾಲಿವುಡ್‍ನಲ್ಲಿ ಈಗಾಗಲೇ ಉಪೇಂದ್ರ ಅವರು ಹಲವಾರು ಹಿಟ್ ಚಲನಚಿತ್ರಗಳಲ್ಲಿ ನಟಿಸುವ ಮೂಲಕ ಆ ನೆಲದಲ್ಲೂ ಸಹ ತಮ್ಮದೇ ಆದ ಅಭಿಮಾನಿ ವರ್ಗವನ್ನು ಗಳಿಸಿಕೊಂಡಿದ್ದಾರೆ. ಈ ಹಿಂದೆ ಆರ್. ಚಂದ್ರು ನಿರ್ದೇಶನದ ಐ ಲವ್ ಯು ಚಿತ್ರದ ತೆಲುಗು ವರ್ಷನ್‍ನಲ್ಲಿ ಸಹ ಅವರೇ ನಾಯಕನಾಗಿ ಕಾಣಿಸಿಕೊಂಡಿದ್ದರು.