ಈ ಬಾರಿ ಅದ್ದೂರಿ ದಸರಾ ಆಚರಣೆಗೆ ಸಿದ್ದತೆ: ಎರಡು ತಿಂಗಳ ಮುಂಚೆಯೇ ಮೈಸೂರಿಗೆ ಗಜಪಡೆ ಕರೆತರಲು ಸಜ್ಜು.

kannada t-shirts

ಮೈಸೂರು,ಜುಲೈ,7,2022(www.justkannada.in):  ಕೊರೋನಾ ಹಾವಳಿಯಿಂದಾಗಿ ಕಳೆದ ಎರಡು ವರ್ಷಗಳಿಂದ ಸರಳವಾಗಿ ಆಚರಿಸಲಾದ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವನ್ನ ಈ ಬಾರಿ ಅದ‍್ಧೂರಿಯಾಗಿ ಆಚರಿಸಲು ಸಿದ‍್ಧತೆಗಳು ನಡೆಯುತ್ತಿದೆ.

ಈ ಬಾರಿಯ ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು, ಅರಣ್ಯ ಇಲಾಖೆ ದಸರಾ ಗಜಪಡೆಯನ್ನು ಸಜ್ಜುಗೊಳಿಸುತ್ತಿದೆ. ದಸರಾ ಆನೆಗಳಿಗೆ ಗುಣಮಟ್ಟದ ಆಹಾರ ಪೂರೈಗೆಗಾಗಿ ಟೆಂಡರ್ ಪ್ರಕ್ರಿಯೆ ಕರೆಯಲಾಗಿದೆ.  ದಸರಾ ಗಜಪಡೆಯನ್ನು ಎರಡು ತಿಂಗಳು ಮುಂಚಿತವಾಗಿಯೇ ಮೈಸೂರಿಗೆ ಕರೆ ತರಲು ತಯಾರಿ ನಡೆಸಲಾಗುತ್ತಿದೆ.

ಆಗಸ್ಟ್ ಮೊದಲ ವಾರದಲ್ಲೇ ದಸರಾ ಗಜಪಡೆ ಮೈಸೂರಿಗೆ ಆಗಮಿಸಲಿದ್ದು,  ಈ ಬಾರಿ 14 ಆನೆಗಳನ್ನು ಕರೆತರಲು ತೀರ್ಮಾನ.ಅಕ್ಟೋಬರ್ 5 ರಂದು ಜಂಬೂಸವಾರಿ ಮೆರವಣಿಗೆ ಜರುಗಲಿದ್ದು, ಇದಕ್ಕಾಗಿ ಗಜಪಡೆಯನ್ನು ಅರಣ್ಯ ಇಲಾಖೆ ಸಜ್ಜುಗೊಳಿಸುತ್ತಿದೆ ಎಂದು ಡಿಸಿಎಫ್ ಕರಿಕಾಳನ್ ಮಾಹಿತಿ ನೀಡಿದ್ದಾರೆ.

ಕಳೆದೆರಡು ವರ್ಷ ಕೋವಿಡ್ ನಿಂದಾಗಿ ಜಂಬೂಸವಾರಿ ಮೆರವಣಿಗೆ ಅರಮನೆ ಆವರಣಕ್ಕೆ ಸೀಮಿತವಾಗಿತ್ತು. ಈ ಬಾರಿ ಕೋವಿಡ್ ಕಡಿಮೆಯಾಗಿರುವ ಹಿನ್ನೆಲೆ ಅದ್ದೂರಿ ದಸರಾ ಆಚರಣೆಗೆ ಸಿದ್ದತೆ ನಡೆಸಲಾಗುತ್ತಿದೆ.

Key words: ready -grand mysore-Dasara-Gajapade-two months

website developers in mysore