ರವೀಂದ್ರ ಜಡೇಜಾ ‘ಸೆಲೆಬ್ರೆಷನ್’ ವೀಡಿಯೋ ವೈರಲ್

Promotion

ಬೆಂಗಳೂರು, ಅಕ್ಟೋಬರ್ 21, 2019 (www.justkannada.in): ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್​​ನಲ್ಲಿ ರವೀಂದ್ರ ಜಡೇಜಾ ಅರ್ಧ ಶತಕ ಸಿಡಿಸಿ ಸಂಭ್ರಮಿಸಿದ್ದಾರೆ. ಈ ವೀಡಿಯೋ ವೈರಲ್ ಆಗಿದೆ.

ಈ ವೇಳೆ ತಮ್ಮ ಸ್ಟೈಲ್​ನಲ್ಲೇ ಅವರು ಕತ್ತಿಯನ್ನ ಒರೆಯಲ್ಲಿ ಸಕ್ಕಿಸುವ ರೀತಿಯಲ್ಲಿ ಌಕ್ಷನ್ ಮಾಡ್ತಾ ತಮ್ಮ ಖುಷಿಯನ್ನ ಡ್ರೆಸ್ಸಿಂಗ್​ ರೂಮ್​ನಲ್ಲಿದ್ದ ಟೀಮ್ ಮೇಟ್​ಗಳ ಜೊತೆ ಹಂಚಿಕೊಂಡಿದ್ದರು.

ಇದಕ್ಕೆ ಕ್ಯಾಪ್ಟನ್ ಕೊಹ್ಲಿ ಕೂಡ ಡ್ರೆಸ್ಸಿಂಗ್ ರೂಮ್​ನಿಂದಲೇ ಮೆಚ್ಚುಗೆ ವ್ಯಕ್ತಪಡಿಸಿದ್ರು. ಆ ಕಡೆಯಿಂದ ಕೊಹ್ಲಿ ಕುದುರೆ ಸವಾರಿ ಕೂಡ ಮಾಡು ಅಂತ ನಗುತ್ತಾ ಸನ್ನೆ ಮೂಲಕ ತೋರಿಸಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.