ಕೆಜಿಎಫ್ 2 ಶೂಟಿಂಗ್ ಮುಗಿಸಿ ಚಿತ್ರತಂಡಕ್ಕೆ ಗುಡ್ ಬೈ ಹೇಳಿದ ರವೀನಾ ಟಂಡನ್

Promotion

ಬೆಂಗಳೂರು, ಫೆಬ್ರವರಿ 29, 2020 (www.justkannada.in): ನಟಿ ರವೀನಾ ಟಂಡನ್ ‘ಕೆಜಿಎಫ್-2’ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಾಸ್ ಆಗಿದ್ದಾರೆ.

ಹೈದರಾಬಾದ್ ‍ ನಲ್ಲಿ ಕೆಜಿಎಫ್ -2 ಚಿತ್ರೀಕರಣ ನಡೆಯುತ್ತಿದ್ದು , ಕೊನೆಯ ಹಂತದ ಚಿತ್ರೀಕರಣದಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಈ ನಡುವೆ ಸಿನಿಮಾದಲ್ಲಿ ಪ್ರಧಾನ ಮಂತ್ರಿ ರಮಿಕಾ ಸೇನ್ ಪಾತ್ರದಲ್ಲಿ ನಟಿಸಿರುವ ಬಾಲಿವುಡ್ ನಟಿ ರವೀನಾ ತಮ್ಮ ಪಾತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ವಾಪಸ್ ತೆರೆಳಿದ್ದಾರೆ.

ಇತ್ತೀಚೆಗಷ್ಟೆ ಕೆಜಿಎಫ್ -2 ತಂಡ ಸೇರಿಕೊಂಡಿದ್ದ ರವೀನಾ ಈಗಾಗಲೇ ಯಶಸ್ವಿಯಾಗಿ ಚಿತ್ರೀಕರಣ ಮುಗಿಸಿದ್ದಾರೆ. ಅಷ್ಟೇ ಅಲ್ಲದೇ ಕೆಜಿಎಫ್ -2 ಸೆಟ್ಟಿನಲ್ಲಿ ತಮ್ಮ ಕೊನೆಯ ದಿನದ ಚಿತ್ರೀಕರಣದ ವೇಳೆ ತಂಡದ ಜೊತೆಗೆ ಪೋಸ್ ಕೊಟ್ಟ ಫೋಟೋವನ್ನು ರವೀನಾ ತಮ್ಮ ಇನ್ ‍ ಸ್ಟಾಗ್ರಾಮ್ ‍ ನಲ್ಲಿ ಹಂಚಿಕೊಂಡಿದ್ದಾರೆ .