Friday, August 14, 2026

BDA Apartments

Home Cinema ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಅಡಿಯೋ ಲಾಂಚ್ ಮುಂದೂಡಿಕೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಅಡಿಯೋ ಲಾಂಚ್ ಮುಂದೂಡಿಕೆ

ಬೆಂಗಳೂರು, ಫೆಬ್ರವರಿ 29, 2020 (www.justkannada.in): ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಅಡಿಯೋ ಲಾಂಚ್ ಕಾರ್ಯಕ್ರಮ ಮುಂದೂಡಿಕೆಯಾಗುವ ಸಾಧ‍್ಯತೆಯಿದೆ.

ಇದೇ ತಿಂಗಳ ಅಂತ್ಯಕ್ಕೆ ರಾಬರ್ಟ್ ಸಿನಿಮಾದ ಅಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಅರ್ಜುನ್ ಜನ್ಯಾ ಲೈವ್ ಕನ್ಸರ್ಟ್ ಮಾಡಬೇಕಿತ್ತು. ಆದರೆ ಅನಾರೋಗ್ಯದ ಹಿನ್ನಲೆಯಲ್ಲಿ ಕಾರ್ಯಕ್ರಮ ಮುಂದೂಡಿಕೆಯಾಗುವ ಸಾಧ್ಯತೆಯಿದೆ ಎಂದು ಸಿನೆಮಾ ತಂಡದ ಮೂಲಗಳು ತಿಳಿಸಿವೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಹೃದಯಾಘಾತದಿಂದಾಗಿ ಆಸ್ಪತ್ರೆ ಸೇರಿದ ಹಿನ್ನಲೆಯಲ್ಲಿ ಚಿತ್ರ ತಂಡ ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.