ಪಿಎಸ್ ಐ ಹಗರಣ ಮುಚ್ಚಿ ಹಾಕಲು ಯತ್ನ- ರಣದೀಪ್ ಸಿಂಗ್ ಸುರ್ಜೇವಾಲ ಆರೋಪ.

ಬೆಂಗಳೂರು,ಜನವರಿ,25,2023(www.justkannada.in): ಪಿಎಸ್ ಐ ನೇಮಕಾತಿ ಹಗರಣವನ್ನ ಸರ್ಕಾರ ಮುಚ್ಚಿ ಹಾಕಲು ಯತ್ನಿಸುತ್ತಿದೆ. ಹೀಗಾಗಿ ಹಗರಣ ಕುರಿತು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಯಬೇಕು ಎಂದು  ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಆರೋಪ ಮಾಡಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ರಣದೀಪ್ ಸಿಂಗ್ ಸುರ್ಜೇವಾಲ,. ಸಿಎಂ ಬಸವರಾಜ ಬೊಮ್ಮಾಯಿ 1 ಲಕ್ಷ ರೂ. ಉದ್ಯೋಗ ಸೃಷ್ಠಿ ಅಂತಾರೆ. ಪೊಲೀಸ್ ಸಬ್ ಇನ್ಸ್ ಫೆಕ್ಟರ್ ಸೇರಿ ಎಲ್ಲಾ ಹುದ್ದೆಗಳು ಮಾರಾಟಕ್ಕಿದೆ ಈಗಾಗಲೇ ಪಿಎಸ್ ಐ ಹಗರಣ ಜನರಿಗೆ ಗೊತ್ತಿದೆ.

ಬಿಜೆಪಿಯವರು ವಿಧಾನಸೌಧವನ್ನ ದುಡ್ಡು ಸ್ವೀಕರಿಸಲು ಇಟ್ಟುಕೊಂಡಿದ್ದಾರೆ. 3 ಕೋಟಿ ಬೇಡಿಕೆ ಇಟ್ಟಿದ್ದಾರೆಂದು ಆರ್ ಡಿ ಪಾಟೀಲ್ ಆರೋಪಿಸಿದ್ದಾರೆ. ಈ ಬಾರಿ ಚುನಾವಣೆಗೂ ಆರ್ ಡಿ ಪಾಟೀಲ್  ಸ್ಪರ್ಧಿಸಬಹುದು ಎಂದರು.

ನ್ಯಾಯಾಧೀಶರ ನೇತೃತ್ವದಲ್ಲಿ ಪಿಎಸ್ ಐ ಹಗರಣ ತನಿಖೆಯಾಗಬೇಕು. ಇಲ್ಲದಿದ್ದರೇ ಸಿಎಂ ಗೃಹ ಸಚಿವರ  ವಿರುದ್ಧ ಕೇಸ್ ಮುಚ್ಚಿಹಾಕಲು ಪ್ರಯತ್ನಿಸುತ್ತಾರೆ ಎಂದು ರಣದೀಪ್ ಸಿಂಗ್ ಸುರ್ಜೇವಾಲ ಆರೋಪಿಸಿದರು.

Key words:Randeep Singh Surjewal- accused -trying – PSI -scam.